ಸ್ವಉದ್ಯೋಗದ ಅರಿವು ಕಾರ್ಯಕ್ರಮ

ಕೋಲಾg,ಆ,೧೩:ತಾಲ್ಲೂಕಿನ ಕಳ್ಳೀಪುರ ಕಾರ್ಯಕ್ಷೇತ್ರದ ಸ್ನೇಹಜ್ಞಾನವಿಕಾಸಕೇಂದ್ರದಲ್ಲಿ ಸ್ವಉದ್ಯೋಗz ಅರಿವು ಮೂಡಿಸುವ ನಿಟ್ಟಿನಲ್ಲಿ ೫೦ ಮಂದಿ ಸದಸ್ಯರಿಗೆ ೨೫೦ ಮಲ್ಲಿಗೆಗಿಡ ವಿತರಣೆ ಮಾಡಿ ಮಲ್ಲಿಗೆ ಗಿಡಗಳ ಕೈ ತೋಟ ಮಾಡಿಸಲು ಸೃಜನಶೀಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲ್ಲೂಕಿ ಯೋಜನಾಧಿಕಾರಿ ಸಿದ್ದಗಂಗಯ್ಯ ಟಿ.ಎಸ್. ಮಾತನಾಡಿ ಈ ದಿನಗಳಲ್ಲಿ ಮಲ್ಲಿಗೆ ಹೂವಿಗೆ ತುಂಬಾನೇ ಬೇಡಿಕೆ ಇದ್ದು, ಎಲ್ಲಾ ಸದಸ್ಯರು ಮಲ್ಲಿಗೆ ಕೈ ತೋಟವನ್ನು ಮಾಡಿ ಬೇರೆಯವರಿಗೆ ವ್ಯಾಪಾರ ಮಾಡಿ ತಮ್ಮ ದಿ ನಿತ್ಯz ಖರ್ಚು ವೆಚ್ಚಗಳನ್ನು ನಿಭಾಯಿಸಿ ಕೊಳ್ಳಬಹುದು ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾಜಾಗೃತಿ ಅರುಣಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸೌಮ್ಯ ಕೆ.ಜಿ, ಗ್ರಾಮ ಪಂಚಾಯಿತಿ ಸದಸ್ಯರು ಮಲ್ಲಿಕಾ ಕಾರ್ಯಕ್ರಮದ ಅಧ್ಯಕ್ಷರು ಸವಿತಾ ಮೇಲ್ವಿಚಾರಕರು ಅಕ್ಕಮಹಾದೇವಿ, ವಲಯದ ಸೇವಾ ಪ್ರತಿನಿಧಿಗಳು ಶಿಲ್ಪ ಮತು ಅಮರಾವತಿ ಉಪಸ್ಥಿತರಿದ್ದರು.