ಸ್ವಂತ ಸಂಘಟನೆಯ ಆಧಾರದ ಮೇಲೆಯೇ ಗೆಲವು ಖಚಿತ: ಸಂಸದ ಭಗವಂತ ಖೂಬಾ

ಬಸವಕಲ್ಯಾಣ:ನ.21: ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ವಂತ ಸಂಘಟನೆಯ ಆಧಾರದ ಮೇಲೆ ಈ ಭಾರಿ ಅಂತರಗಳಿಂದ ಗೆಲುವು ಸಾಧಿಸಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಗುಂಪುಗಾರಿಕೆ ಸೇರಿದಂತೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಎಲ್ಲರೂ ಕೂಡಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಒಳ್ಳೆಯ ಆಡಳಿತ ನೀಡುವ ಮೂಲಕ ಅನೇಕ ಜನಪರ ಯೋಜನೆಗಳು ಜಾರಿಗೊಳಿಸಿದ್ದಾರೆ. ಸರ್ಕಾದರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಎಲ್ಲಾ ಮೋರ್ಚಾಗಳನ್ನು ರಚಿಸಲಾಗಿದ್ದು, ಹೀಗಾಗಿ ಸಂಘಟನೆಗೆ ಹೆಚ್ಚಿನ ಶಕ್ತಿ ಬಂದಿದೆ. ಈ ಬಾರಿ ಸ್ವಂತ ಬಲದಿಂದ ವೈಚಾರಿಕ ತಳಹದಿಯ ಮೇಲೆ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ವಿಧಾನ ಪರಿಷತ್ ಸದಸ್ಯ ರಘುನಥರಾವ ಮಲ್ಕಾಪೂರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ, ಮುಖಂಡ ಸಂಜಯ ಪಟವಾರಿ, ಪಕ್ಷದ ತಾಲೂಕು ಅಧ್ಯಕ್ಷ ಅಶೋಕ ವಕಾರೆ ಮಾತನಾಡಿದರು.
ವೇದಿಕೆಯಲ್ಲಿ ಶಾಸಕರಾದ ದತ್ತಾತ್ರೆಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಜಿಪಂ ಸದಸ್ಯ ಸುಧೀರ ಕಾಡಾದಿ, ಶೈಲೆಂದ್ರ ಬೆಲ್ದಾಳೆ, ಡಿ.ಕೆ ಸಿದ್ರಾಮ, ಅಶೋಕ ಹೊಕ್ರಾಣಿ, ಸೂರ್ಯಕಂತ ನಾಗಮಾರಪಳ್ಳಿ, ಪ್ರದೀಪ ವಾತಾಡೆ, ಉಮೇಶ ಬಿರಬಿಟ್ಟೆ, ಅನೀಲ ಭೂಸಾರೆ, ಲತಾ ಹಾರಕೂಡೆ, ಪದ್ಮಾಕರ ಪಾಟೀಲ, ಶಂಕರ ನಾಗದೆ, ಶೋಭಾ ತೆಲಂಗ, ಜಗನ್ನಾಥ ಚಿಲ್ಲಾಬಟ್ಟೆ, ಮಲ್ಲಿಕಾರ್ಜುನ ಕುಂಬಾರ, ಅರವಿಂದ ಮುತ್ತೆ, ಶರಣು ಸಲಗರ, ದೀಪಕ ಗಾಯಕವಾಡ, ದೀಪಕ ಗುಡ್ಡಾ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಾ.ಬಸವರಾಜ ಸ್ವಾಮಿ ವಂದೇ ಮಾತರಂ ಗೀತೆ ಹಾಡಿದರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಣಮಂತ ದರ್ಜೆ ನಿರೂಪಿಸಿದರು. ಕಿಶನ ಸಿಂಗ್ ಹಜಾರಿ ವಂದಿಸಿದರು.
ಮುಚಳಂಬ ಮಠಕ್ಕೆ ಭೇಟಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮುಚಳಂಬ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಅವರಿಂದ ಅಶಿರ್ವಾದ ಪಡೆದರು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಠದ ಒಬ್ಬ ಪರಮ ಭಕ್ತನಾಗಿ ಇಂದು ಭೇಟಿ ನೀಡಿದ್ದೇನೆ. ನಮ್ಮ ಸರಕಾರದ ವತಿಯಿಂದ ಮಠದ ಅಭಿವೃದ್ದಿಗಾಗಿ ಅಗತ್ಯವಿರುವ ಅನುದಾನ ಮಂಜೂರಿ ಮಾಡುವ ಮೂಲಕ ಮಠದ ಪ್ರಗತಿಗೆ ಶ್ರಮಿಸಲಾಗುವದು ತಿಳಿಸಿದರು.