ಸ್ವಂತ ನಿಧಿ ಕ್ರಿಯಾ ಯೋಜನೆ ಆದೇಶ ವಾಪಸ್ಸಿಗೆ ಆಗ್ರಹ

ಕೋಲಾರ,ಆ.೨೧- ವರ್ಗ ೧ರ ಗ್ರಾಮ ಪಂಚಾಯತಿ ಸ್ವಂತ ನಿಧಿ ಕ್ರಿಯಾ ಯೋಜನೆಗೆಳಿಗೆ ಜಿಲ್ಲಾ ಪಂಚಾಯತ್ ಅನುಮಮೋದನೆ ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧ್ಯಕ್ಷ ಎಂ.ಎನ್ ರಾವ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಇದರ ಜೊತೆಗೆ ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‍ಸ್ ಕೊರತೆ, ಕಾಯಕ ಮಿತ್ರ ಸಿಬ್ಬಂದಿ ಕೊರತೆ, ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಹಣ ಬಿಡುಗಡೆ, ಆಶ್ವಾಸನಾ ನಿಧಿ ಇನ್ನಿತರೆ ವಿಷಯಗಳ ಬಗ್ಗೆ ಅವರ ಗಮನಕ್ಕೆ ತರಲಾಯಿತು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಈ ಕೂಡಲೇ ಮಾಡಿರುವಂತ ಆದೇಶವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಚಲಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮದನಹಳ್ಳಿ ಎಂ.ಕೆ.ಮಹೇಶ್, ತಾಲೂಕು ಅಧ್ಯಕ್ಷ ವಿಟ್ಟಪ್ಪನಹಳ್ಳಿ ನಾರಾಯಣಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಹಾಗೂ ಸುಗಟೂರು ಗ್ರಾಮ ಪಂಚಾಯತಿ ಅಧ್ಯಕ್ಷ ಅಂಕತಟ್ಟಿ ಎಸ್.ಭೂಪತಿಗೌಡ, ಗ್ರಾಮ ಪಂಚಾಯತಿಯ ಶಾಪೂರು ಅಧ್ಯಕ್ಷ ರಾಮಕೃಷ್ಣೇಗೌಡ, ಹುತ್ತೂರು ಅಧ್ಯಕ್ಷೆ ವರಲಕ್ಷ್ಮಿ, ವಡಗೂರು ಅಧ್ಯಕ್ಷೆ ಸುಮಿತ್ರಮ್ಮ, ಐತರಾಸನಹಳ್ಳಿ ಅಧ್ಯಕ್ಷೆ ಆನಂದಮ್ಮ ವೆಂಕಟೇಶ್, ಉರಿಗಿಲಿ ಅಧ್ಯಕ್ಷೆ ಅನುಮುನಿರಾಜು, ಮದ್ದೇರಿ ಅಧ್ಯಕ್ಷ ಆರ್.ವೆಂಕಟೇಶ್, ಗಂಗರಸನಹಳ್ಳಿ ಸುರೇಶ್, ಉರಿಗಿಲಿ ವೆಂಕಟಸ್ವಾಮಿ ಇನ್ನಿತರ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.