ಸ್ವಂತ ಖರ್ಚಿನಲ್ಲಿ ವಿದ್ಯುದ್ದೀಪ ಅಳವಡಿಕೆ

ಹಿರಿಯೂರು.ಮಾ.27: ಹಿರಿಯೂರು ನಗರಸಭೆ ಸದಸ್ಯರಾದ ಶಿವರಂಜನಿ ಯಾದವ್ ರವರು ತಮ್ಮ ವಾರ್ಡಿನಲ್ಲಿ ಸ್ವಂತ ಖರ್ಚಿನಿಂದ ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರಿಗೆ ನೆರವಾಗಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ವಾರ್ಡ್ ನಲ್ಲಿ ಸಂಜೆ ಹೊತ್ತು ಕತ್ತಲು ಆವರಿಸುವ ದೃಷ್ಟಿಯಿಂದ ಸಾಧ್ಯವಾದಷ್ಟು ಬೇಗನೆ ಬೆಳಕು ನೀಡಬೇಕೆಂದು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನನ್ನ ಸ್ವಂತ ಖರ್ಚಿನಲ್ಲಿ ವಿದ್ಯದ್ದೀಪಗಳನ್ನು ಅಳವಡಿಸಲು ಮುಂದಾಗರುವುದಾಗಿ ತಿಳಿಸಿದರು. ಮೂರನೇ ವಾರ್ಡ್ ನ ಸಾರ್ವಜನಿಕರು ನಗರಸಭೆ ಸದಸ್ಯೆ ಶಿವರಂಜನಿ ಯಾದವ್ ರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.