ಸ್ವಂತ ಖರ್ಚಿನಲ್ಲಿ ಲಸಿಕೆ ತರಿಸಲು ಮುಂದಾದ ಶಾಮನೂರು ಶಿವಶಂಕರಪ್ಪ

ದಾವಣಗೆರೆ.ಮೇ.28; ಕೊರೊನಾ ಲಸಿಕೆಗಾಗಿ ಎಲ್ಲಡೆ ಹಾಹಾಕಾರ ಉಂಟಾಗಿದೆ. ಇದರ ನಡುವೆ ಶಾಸಕ ಶಾಮನೂರು ಶಿವಶಂಕರಪ್ಪ  ಸ್ವಂತ ಖರ್ಚಿನಲ್ಲಿ ಜನರಿಗೆ ನೀಡಲು 40 ಸಾವಿರ ವೈಲ್ ಲಸಿಕೆಗೆ  ಆರ್ಡರ್ ನೀಡಿರುವುದಾಗಿ ತಿಳಿಸಿದರು.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ನಾವು 50 ಸಾವಿರ ವೈಲ್ ಕೊರೊನಾ ಕೋವ್ಯಾಕ್ಸಿನ್  ಲಸಿಕೆಗೆ ಆರ್ಡರ್ ನೀಡಿದ್ದೇವು.  ಆದರೆ, ಲಸಿಕಾ ಕಂಪನಿಗಳು 40 ಸಾವಿರ ವೈಲ್ ನೀಡಲು ಒಪ್ಪಿಕೊಂಡಿವೆ. ಇನ್ನೂ ಎರಡು ಮೂರು ದಿನದಲ್ಲಿ 1 ಸಾವಿರ ವೈಲ್ ಬರಲಿದ್ದು, ಇದರಿಂದ 10 ಸಾವಿರ ಜನರಿಗೆ ಲಸಿಕೆ ಹಾಕಬಹುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಲಸಿಕೆ ಬರಲಿದೆ  ಎಂದು ಮಾಹಿತಿ ನೀಡಿದರು.ಇನ್ನು ಬಿಜೆಪಿ ಅವರು ಕೊರೊನಾ ಲಸಿಕೆ ನೀಡಲು ಚೀಟಿ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಕೊರೊನಾ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅವರಿಗೆ ಎಂದು ಬರುವುದಿಲ್ಲ. ಕೊರೊನಾ ಸಂಕಷ್ಟ ಸಮಯದಲ್ಲಿ  ಚೀಟಿ ಬರೆದುಕೊಡುವ ರಾಜಕಾರಣ ಸರಿಯಲ್ಲ. ಎಲ್ಲರೂ ಸೇರಿ ಕೊರೊನಾ ಓಡಿಸುವ ಪ್ರಯತ್ನ ಮಾಡೋಣ. ಕೋವಿಡ್ ಕೇರ್ ಸೆಂಟರ್ ಗಾಗಿ ನಮ್ಮ ಸಂಸ್ಥೆಯ ಹಾಸ್ಟಲ್ ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದೇವೆ. ಆದರೆ, ಜಿಲ್ಲಾಡಳಿತ ಬಳಸಿಕೊಳ್ಳುತ್ತಿಲ್ಲ ಎಂದರು.ಈ ವೇಳೆ ಮೇಯರ್ ಎಸ್.ಟಿ ವಿರೇಶ್,ಶಶಿಧರ್ ಹೆಮ್ಮನಬೇತೂರು,ಅಣಬೇರು ರಾಜಪ್ಪ ಇತರರಿದ್ದರು.