ಸಿರವಾರ,ಮಾ.೨೪- ತಾವು ದುಡಿದ ಹಣದಲ್ಲಿ ಬೇಸಿಗೆ ಕಾಲದಲ್ಲಿ ೨ ತಿಂಗಳು ಜನರಿಗೆ ನೀರಿನ ದಾಹವನ್ನು ನೀಗಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ಅ.ಭಾ.ವೀ.ಸ.ಯುವಘಟಕದ ಜಿಲ್ಲಾಧ್ಯಕ್ಷ ಶಿವಶರಣ ಸಾಹುಕಾರ ಅರಕೇರಿ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ವೀರಭದ್ರ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ನೀರಿನ ಅರವಟ್ಟಿಗೆಯನ್ನು ಚಂದ್ರಶೇಖರ ಹಡಪದ್ ಹಾಗೂ ಗಂಗಾದರ ಹಡಪದ್ ಸಹೋದರರು ಪ್ರಾರಂಭಿಸಿದ್ದಾರೆ.
ನೀರಿನ ಅರವಟಿಗೆ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಊಟ ಇಲ್ಲದೆ ಬದುಕುತ್ತಾನೆ ಆದರೆ ನೀರು ಇಲ್ಲದೆ ಬದುಕಲಾರ, ಬೇಸಿಗೆ ಕಾಲದಲ್ಲಿ ಪಟ್ಟಣಕ್ಕೆ ಬೇರೆ ಬೇರೆ ಗ್ರಾಮ, ಹಳ್ಳಿಗಳಿಂದ ಬರುವವರಿಗೆ ಇದು ಅನುಕೂಲವಾಗುತ್ತದೆ. ಶುದ್ಧ ಕುಡಿಯುವ ನೀರನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನೀಂಬಯ್ಯ ತಾತ, ಚಂದ್ರಶೇಖರ ಹಡದ್, ಗಂಗಾಧರ ಹಡಪದ್, ಅಯ್ಯಪ್ಪ, ಬಸವರಾಜ, ಹುಲಿಗೆಪ್ಪ ಮಡಿವಾಳ ಸೇರಿದಂತೆ ಇತರರು ಇದ್ದರು.