ಸ್ಲಂ ಹಕ್ಕುಪತ್ರ ಜನತೆಗೆ ಮೋಸ

ರಾಯಚೂರು,ಮಾ.೧೯- ಜೆಡಿಎಸ್ ಪಕ್ಷದ ಮನೆ ಮನೆಗೆ ಪಂಚರತ್ನ ಯೋಜನೆಯ ಕಾರ್ಯಕ್ರಮ ರಾಯಚೂರ ನಗರ ವಿಧಾನಸಭಾ ಕ್ಷೇತ್ರದ ವಾರ್ಡ ನಂ ೪ ರಲ್ಲಿ ವಾರ್ಡಿನ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ. ರಾಯಚೂರ ನಗರ ಕ್ಷೇತ್ರದ ಅಭ್ಯರ್ಥಿಯಾದ ಈ ವಿನಯಕುಮಾರ ಮಾತನಾಡಿ ” ಕಾಂಗ್ರೆಸ್ಸಿನ ಯುವ ಮುಖಂಡ ಮುಸ್ಲಿಮರ ಸಮುದಾಯ ಬಗ್ಗೆ ಅಪಾರ ಕಾಳಜಿ ತೋರಿಸುತ್ತರೆ ಆದರೆ ನಗರಸಭೆ ಅಧ್ಯಕ್ಷ ಸ್ಥಾನ ಇದುವರೆಗೂ ಮುಸ್ಲಿಮರ ಸಮುದಾಯರಿಗೆ ಅಧ್ಯಕ್ಷ ಸ್ಥಾನ ಏಕೆ ನೀಡಲಿಲ್ಲ ಕಾಂಗ್ರೆಸ್ಸಿನವರು ಕೇವಲ ಮುಸ್ಲಿಮರ ಬಗೆ ಮೋಸಳೆ ಕಣ್ಣೀರ ಸುರಿಸುತ್ತಾರೆ , ಈಗ ವಿಧಾನಸಭೆಯ ಚುನಾವಣೆಯಲ್ಲಿ ಅದೇ ಮಾಡುತ್ತರೆ
ನಗರದಲ್ಲಿ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕರು ಹೇಳುತ್ತಾರೆ ಈಗ ಮತ್ತೆ ಯಾವ ವಾರ್ಡಿನಲ್ಲಿ ಮೊದಲು ಕೆಲಸ ಮಾಡಿದ ರಸ್ತೆಯ ಹಾಳು ಆಗಿವೆ ಈಗ ಮತ್ತೆ ಅದೇ ಕಾಮಗಾರಿಯನ್ನು ಮಾಡಲಾಗುತ್ತಿದೆ ಇದು ಬೋಗಸ್ ಬಿಲ್ ಅಭಿವೃದ್ಧಿ ಕೆಲಸವಾಗಿದೆ ಎಂದರು.
ಜಿಲ್ಲಾ ಅಧ್ಯಕ್ಷ ಎ ವಿರುಪಾಕ್ಷಿ ” ರಾಯಚೂರು ನಗರದಲ್ಲಿ ನೂರಾರು ಕೋಟಿ ಅನುದಾನ ತಂದಿದ್ದು ಶಾಸಕ ಶಿವರಾಜ ಪಾಟೀಲ ಹೇಳುತ್ತರೆ ಆದರೆ ಫ್ರತಿ ವಾರ್ಡ್ ಗಳಲ್ಲಿ ಯಾವದೇ ಅಭಿವೃದ್ಧಿಯ ಕಾಣುತ್ತಿಲ್ಲ ಹಿಂಬಾಲಕರಿಗೆ ಹಣ ಲೂಟಿ ಮಾಡಲು ಅನುದಾನ ತಂದಿದ್ದಾರೆ,ಕೇವಲ ಅವರು ಅಭಿವೃದ್ಧಿಯಾಗಿದರೆ ನಗರ ಅಲ್ಲ ಎಂದರು.
ರಾಜ್ಯ ವಕ್ತಾರ ಎನ್ ಶಿವಶಂಕರ ವಕೀಲರು ಮಾತನಾಡಿ ಎರಡು ರಾಷ್ಟ್ರೀಯ ಪಕ್ಷಗಳು ಧರ್ಮ ಧರ್ಮಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ರೈತರ, ಜನಸಾಮಾನ್ಯರ, ಸಂಕಷ್ಟ ಚಿಂತನೆ ಮಾಡುವದಿಲ್ಲ ಜೆಡಿಎಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಜನಸಾಮಾನ್ಯರ ಕಷ್ಟ ಸುಖಗಳನ್ನು ತಿಳಿಯುತ್ತಿದ್ದಾರೆ ಪಂಚರತ್ನ ಯೋಜನೆಯ ಸೌಲಭ್ಯ ಕಲ್ಪಿಸುವ ಸ್ಪಷ್ಟ ಸಂದೇಶ ನೀಡುತಿದ್ದಾರೆ ಎಂದರು.
ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ವಿಶ್ವನಾಥ ಪಟ್ಟಿ ಮಾತನಾಡಿ “ವಾರ್ಡ ೩ ರಲ್ಲಿ ಪಂಚರತ್ನ ಯೋಜನೆಯ ಮನೆ ಮನೆ ಪ್ರಚಾರ ಕೈಗೊಳ್ಳುವ ಮೂಲಕ ನಮ್ಮ ಕಾರ್ಯಕರ್ತರ ಚುನಾವಣೆಗೆ ಸಿದ್ದರಿದ್ದಾರೆ ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಸಂಕಷ್ಟ ಎದುರಿಸುತ್ತಿದ್ದಾರೆ ಇದಕ್ಕೆ ಪರಿಹಾರ ಕುಮಾರಣ್ಣ ಮಾತ್ರ ಎಂದರು.
ಗೌರವ ಅಧ್ಯಕ್ಷ ಯೂಫಸ್ ಖಾನ್ ಜಿಲ್ಲಾಕಾರ್ಯಧ್ಯಕ್ಷ ದಾನಪ್ಪಯಾದವ ರಾಜ್ಯ ಅಲ್ಪಸಂಖ್ಯಾತರ ಕಾರ್ಯದರ್ಶಿಯಾದ ಸೈಯದ್ ಹುಸನ್ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ , ಕಾರ್ಮಿಕ ಅಧ್ಯಕ್ಷ ನರಸಿಂಹಲು ಅಂಜಿನಯ್ಯ ಯಾದವ ವಕೀಲರು, ಈರಣ್ಣ ಯಾದವ, ಶಿವಕುಮಾರ ಯಾದವ, ಶ್ಯಾಮಸುಂದರ್, ಪ್ರಕಾಶ, ನಾಗರಾಜ, ರವಿ ಮಡಿವಾಳ, ನರಸಪ್ಪ ಆಶಾಪೂರ, ಪಾರ್ಥ, ನರಸಿಂಹಲು, ಕೆ ಅಂಜಿನಯ್ಯ, ಮಹೇಶ್, ಭೀಮಣ್ಣ , ಸಿದ್ದಪ್ಪ ತಳವಾರ್ ,ಅವಿಲ್ ,ವೆಂಕಟೇಶ ಅರೊಲಿಕರ್ ಮಾರೆಪ್ಪ , ಉಪಸಿತಿದ್ದರು .