ಸ್ಲಂ ಬೋರ್ಡ್ ಎಇಇಕೃಷ್ಣಾರೆಡ್ಡಿ ಸಸ್ಪೆಂಡ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.27: ಅಂತೂ ಇಂತು ಸ್ಲಂ ಬೋರ್ಡಿನ ಎಇಇ ಕೃಷ್ಣಾ ರೆಡ್ಡಿ ಅವರನ್ನು ಅಮಾನತು ಮಾಡುವಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಕಚೇರಿಯಲ್ಲಿ ಕಾಣದೇ ಇರುವ, ನಗರದ ಲಾಡ್ಜೊಂದರಲ್ಲಿಯೇ ಇಲಾಖೆಯ ವ್ಯವಹಾರ ನಡೆಸುತ್ತಿದ್ದ. ಸರ್ಕಾರದ ಸಮಾರಂಭಗಳಿಗೆ, ಪ್ರಗತಿ ಪರಿಶೀಲನಾ  ಸಭೆಗಳಿಗೆ ಹಾಜರಾಗದೆ, ಈ ವರೆಗೆ ಶಾಸಕರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ  ಮುಖ ತೋರಿಸದೇ ನನ್ನ ಯಾರು ಏನು ಮಾಡಿಕೊಳ್ಳುವರು ಎನ್ನುವಂತೆ ವರ್ತಿಸುತ್ತಿದ್ದ ನಗರದಲ್ಲಿನ  ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ‌ಇಂಜಿನೀಯರ್ ಕೃಷ್ಣ ರೆಡ್ಡಿ.
ಸ್ವತಃ ವಸತಿ ಸಚಿವ ಜಮೀರ್  ಅಹ್ಮದ್ ಖಾನ್ ನಿನ್ನೆ ಜಿಲ್ಲೆಯಲ್ಲಿ ವಸತಿ ಯೋಜನೆಯ ಸ್ಥಳ ಪರಿಶೀಲನೆಯ ಮಾಡುವ ಸಂದರ್ಭದಲ್ಲಿಯೂ ಸಹ  ಸ್ಥಳಕ್ಕೆ ಬರದೇ ಇದ್ದರು.
ಮೊನ್ನೆ ಜನತಾ ದರ್ಶನಕ್ಕೂ ಬಂದಿರಲಿಲ್ಲ. ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆಗೂ ಬಾರದ ಇವರನ್ನು ಕರ್ತವ್ಯ ನಿರ್ಲಕ್ಷ,  ಕರ್ತವ್ಯ ಲೋಪ ಎಸಗಿರುವುದರಿಂದ ಮತ್ತು ಈ ಅಧಿಕಾರಿಯ ವಿರುದ್ಧ ಜನಪ್ರತಿನಿಧಿಗಳು,  ಸಾರ್ವಜನಿಕರಿಂದ ದೂರುಗಳು ಇರುವುದರಿಂದ  ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 10(1)(ಡಿ)ರಡಿ ಇಲಾಖಾ ವಿಚಾರಣೆಯನ್ನು ಬಾಕಿ ಇಟ್ಟು,  ಮುಂದಿನ ಆದೇಶದವರೆಗೆ ಅಮಾನತ್ತುಗೊಳಿಸಿ, ಆದೇಶಿಸಲಾಗಿದೆ ಎಂದು ವಸತಿ ಇಲಾಖೆಯ ಉಪ‌ ಕಾರ್ಯದರ್ಶಿ ಸಿ.ಶಿವಣ್ಣ ನಿನ್ನೆ ಆದೇಶಿಸಿದ್ದಾರೆ

One attachment • Scanned by Gmail