ಸ್ಲಂ ನಿವಾಸಿಗಳಿಗೆ ಕೊರೋನಾ ಮಹಾಮಾರಿ ಕುರಿತು ಜಾಗೃತಿ ಮೂಡಿಸಿದ ಯುವಕರು

ವಿಜಯಪುರ, ಏ.28-ನಗರದ ವಜ್ರ ಹನುಮಾನ ದೇವಸ್ಥಾನದ ಹತ್ತಿರ ವಿರುವ ಸ್ಲಂಗಳಲ್ಲಿ ಸೆನಿಟೈಜರ್ ಸಿಂಪಡಿಸಿ, ಸ್ಲಂ ನಿವಾಸಿಗಳಿಗೆ ಕೊರೋನಾ ಮಹಾಮಾರಿ ರೋಗದ ಕುರಿತು ಜಾಗೃತಿಯನ್ನು ಗಾನಯೋಗಿ ಸಂಘದ ಪದಾಧಿಕಾಗಳು ಮೂಡಿಸಿದರು.
ಅದು ಅಲ್ಲದೇ ಕೆ.ಸಿ. ನಗರ ಹತ್ತಿರ ವಿರುವ ಸ್ಲಂಗಳಲ್ಲಿಯೂ ಸಹಿತ ಸೆನಿಟೈಜರ್ ಸಿಂಪಡಿಸಿ ಅಲ್ಲಿನ ನಿವಾಸಿಗಳಿಗೂ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ ಆರ್.ಕೆ. ಮಾತನಾಡಿ, ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಉಲ್ಭಣಗೊಳ್ಳುತ್ತಿದ್ದು ಜನರು ಭಯಪಡದೇ ಕೊರೋನಾ ಮಹಾಮಾರಿ ರೋಗಕ್ಕೆ ಜಾಗೃತಿ ವಹಿಸಬೇಕಾಗಿದೆ. ಅದರಂತೆ ಪ್ರತಿಯೊಬ್ಬರು ಮಾಸ್ಕ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದು ಕೊಂಡಿದ್ದೆ ಆದರೆ ಈ ರೋಗವನ್ನು ತಡೆಯಬಹುದಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸರ್ಕಾರ ಕೂಡ ಸ್ಲಂ ಬಡ ಜನರಿಗೆ ಸಹಾಯ ಮಾಡಲು ಮುಂದಾಗಬೇಕು. ಆಂಧ್ರ ಪ್ರದೇಶದ ಮಾದರಿಯಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಉಚಿತ ಸೇವೆಯನ್ನು ಮಾಡಬೇಕು ಎಂದು ಸರ್ಕಾರಕ್ಕೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸಂತೋಷ ಚವ್ಹಾಣ, ಕಿರಣ ಶಿವಣ್ಣನವರ, ಸಚೀನ ವಾಲೀಕಾರ, ರಾಜು ಹೊಸಟ್ಟಿ, ವಿಕಾಸ ಕಂಬಾಗಿ, ರವಿ ರತ್ನಾಕರ, ವಿಠ್ಠಲ, ವಿರೇಶ, ಸಚೀನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.