ಸ್ಲಂ ಕೇರ್ ಆಫ್ ಡ್ರೀಮ್ ಸಿನೆಮಾದ ಟೀಸರ್ ಬಿಡುಗಡೆ

ಧಾರವಾಡ-7-ಧಾರವಾಡದ ಆಲೂರು ವೆಂಕಟರಾವ ಭವನದಲ್ಲಿ ಉದಯೋನ್ಮುಖ ನಿರ್ದೇಶಕ ರಘುವೀರ ನಿರ್ದೇೀಶನದಲ್ಲಿ ಮೂಡುಬರುತ್ತಿರುವ ಸ್ಲಮ್ ಕೇರ ಆಫ್ ಡ್ರೀಮ್ ಚಲನಚಿತ್ರದ ಟೀಸರ ಬಿಡುಗಡೆ ಸಮಾರಂಭ ನಡೆಯಿತು.
ಬಾಲ ವಿಕಾಸ ಆಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಚಲನಚಿತ್ರದ ಟೀಸರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಲಮ್ ಕೇರ ಆಫ್ ಡ್ರೀಮ್ ಚಲನಚಿತ್ರ ಹೊಸತನದೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದು, ಸ್ಲಮ್ ನಲ್ಲಿನ ಪರಿಸರ, ಅಲ್ಲಿನ ಬಾಲಕರ ಕನಸುಗಳ ಅನಾವರಣದ ಕುರಿತು ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರ ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ಮಾತನಾಡಿ, ಸ್ಲಮ್ ಮಕ್ಕಳು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಯುವಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಿಕ್ಕಂತಾಗಿದೆ ಎಂದರು. ಸಮಾರಂಭದಲ್ಲಿ ಬಿಜೆಪಿಯ ಮುಖಂಡ ಶ್ರೀನಿವಾಸ ಕೋಟ್ಯಾನ, ಉತ್ತರ ಕರ್ನಾಟಕ ಫಿಲ್ಮ್ ಛೇಂಬರ ಅಧ್ಯಕ್ಷ ಶಂಕರ ಸುಗತೆ, ಚಿತ್ರ ನಿರ್ಧೇಶಕ ರಘುವೀರ, ಶಿವಶಂಕರ ಅಪ್ಪಾಜಿ ಭಾಗವಹಿಸಿದ್ದರು.