ಸ್ಯೂಟಿಕ್ ಲ್ಯಾಬ್ ಕಾರ್ಖಾನೆ ಬಳಿ ವ್ಯಕ್ತಿ ಸಂಶಯಾಸ್ಪದ ಸಾವು

ಹುಮನಾಬಾದ್:ನ.19: ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಸ್ಯೂಟಿಕ್ ಲ್ಯಾಬ್ ಕಾರ್ಖಾನೆ ಬಳಿ ಜಾಖರ್ಂಡ ಮೂಲದ ಜುಗಲೇಶ (22) ಎಂಬುವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತ ಜುಗಲೇಶ ಮತ್ತು ರಾಸಾಯನಿಕ ಕಾರ್ಖಾನೆಗೆ ಯಾವುದೇ ರೀತಿ ಸಂಬಂಧವಿಲ್ಲ ಎಂದು ಕಾರ್ಖಾನೆಯ ಅಧಿಕಾರಿಗಳು ಹೇಳಿದ್ದಾರೆ.

ಕಂಪನಿಯ ಹೊರವಲಯದಲ್ಲಿ ವ್ಯಕ್ತಿ ಬಿದ್ದಿದ್ದು ಕಂಡು ಆವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿಲ್ಲ. ಈ ಸಾವು ಸಂಶಯಾಸ್ಪದವಾಗಿದೆ. ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ತಿಳಿಸಿದ್ದಾರೆ. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.