ಸ್ಯಾಂಪಲ್ ಕೊಡಲು ನಿರಾಕರಿಸಿಲ್ಲ: ಭಜರಂಗ್

ನವದೆಹಲಿ.ಮೇ.೬- ನಾನು ಸ್ಯಾಂಪಲ್ ನೀಡುವುದಕ್ಕೆ ಯಾವತ್ತೂ ನಿರಾಕರಿಸಿಲ್ಲ. ಆದರೆ ನನಗೆ ಸ್ಯಾಂಪಲ್ ಸಂಗ್ರಹಿಸಲು ತಂದಿದ್ದ ಕಿಟ್ ಬಗ್ಗೆ ಪ್ರತಿಕ್ರಿಯಿಸುವಂತೆ
ಕೇಳಿದ್ದೆ ಎಂದು ತಾರಾ ಕುಸ್ತಿಪಟು ಭಜರಂಗ್ ಪುನಿಯಾ ತಿರುಗೇಟು ನೀಡಿದ್ದಾರೆ.
ರಾಷ್ಟ್ರೀಯ ಉದ್ದೀಪನಾ ಸಂಸ್ಥೆ (ನಾಡಾ) ತಾತ್ಕಲಿಕವಾಗಿ ಅಮಾನತು ಮಾಡಿರುವ ಕುರಿತು ಕುಸ್ತಿಪಟು ಭಜರಂಗ್ ಪ್ರತಿಕ್ರಿಯಿಸಿದ್ದಾರೆ.
ನಾನು ನನ್ನ ಉದ್ದೀಪನಾ ಔಷಧ ಪರೀಕ್ಷೆ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ನಾನು ಯಾವತ್ತೂ ಸ್ಯಾಂಪಲ್ ನೀಡಲು ನಿರಾಕರಿಸಿಲ್ಲ. ನನ್ನ ಸ್ಯಾಂಪಲ್ ಪರೀಕ್ಷಿಸಲು
ಅವಧಿ ಮುಗಿದಿರುವ ಕಿಟ್ ತಂದಿದ್ದರು. ಹೀಗಾಗಿ ನಾನು ಇದರ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿದೆ. ಅವಧಿ ಮುಗಿದ ಕಿಟ್ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ.
ಪ್ರತಿಕ್ರಿಯೆ ಕೊಟ್ಟು ಸ್ಯಾಂಪಲ್ ಸಂಗ್ರಹಿಸುವಂತೆ ಮನವಿ ಮಾಡಿದ್ದೆ. ಈ ನೋಟಿಸ್‌ಗೆ ನನ್ನ ವಕೀಲ ವಿಧುಶ್ಪತ್ ಸಿಂಘಾನಿಯಾ ಪ್ರತಿಕ್ರಿಯಿಸಲಿದ್ದಾರೆ ಎಂದು ಭಜರಂಗ್ ಪುನಿಯಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ನಡೆದ ಟ್ರಯಲ್ಸ್ ವೇಳೆ ಭಜರಂಗ್ ಸ್ಯಾಂಪಲ್ ನೀಡಿಲ್ಲ ಎಂದು ಆರೋಪಿಸಿ ನಾಡಾ ಭಜರಂಗ್ ಅವರನ್ನು ತಾತ್ಕಲಿಕವಾಗಿ ಅಮಾನತುಗೊಳಿಸಿತ್ತು.
ಇದೀಗ ೬೫ ಕೆಜಿ ವಿಭಾಗದಲ್ಲಿ ಸ್ಪರ್ಧಿಸುವವರೆ ಇಲ್ಲದಂತಾಗಿದೆ.