ಸ್ಯಾಂಡಲ್ ರೋಸ್ ಆಂಗ್ಲ ಮಾಧ್ಯಮ ಶಾಲೆಗೆ 100% ರಷ್ಟು ಫಲಿತಾಂಶ

ಸಂಜೆವಾಣಿ ವಾರ್ತೆ
ಮೈಸೂರು.ಮೇ.11:- ಮೈಸೂರಿನ ಡಿ ಸಾಲುಂಡಿ ಗ್ರಾಮದ ಶ್ರೀ ಬಸವೇಶ್ವರ ಎಜುಕೇಶನಲ್ ಟ್ರಸ್ಟ್ ನ ಸ್ಯಾಂಡಲ್ ರೋಸ್ ಆಂಗ್ಲ ಮಾಧ್ಯಮ ಶಾಲೆಗೆ 100% ನೂರರಷ್ಟು ಫಲಿತಾಂಶ ಬಂದಿದ್ದು, ದೊಡ್ಡಹುಂಡಿ ಗ್ರಾಮದ ಲಕ್ಷ್ಮಿ ನಾಗರಾಜು ದಂಪತಿಗಳ ಪುತ್ರಿಯಾದ ಅನು ರವರು 625ಕ್ಕೆ 608 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , ಎರಡು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಶ್ರೀಮತಿ ಶೋಭಾ ಶಿವರಾಜು, ಮುಖ್ಯ ಶಿಕ್ಷಕರಾದ ಮಧನ್ ಕುಮಾರ್ ಮತ್ತು ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.