ಸ್ಯಾಂಟ್ರೋ ರವಿ ಕೋರ್ಟ್‍ಗೆ ಹಾಜರು: ನ್ಯಾಯಾಧೀಶರಿಂದ ಪೊಲೀಸರಿಗೆ ತರಾಟೆ

ಮೈಸೂರು,ಜ.16:- ನ್ಯಾಯಾಂಗ ಬಂಧನದಲ್ಲಿದ್ದ ಸ್ಯಾಂಟ್ರೋ ರವಿಯನ್ನ ಇಂದು ಮೈಸೂರಿನ 6ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ಈ ವೇಳೆ ಪೊಲೀಸರಿಗೆ ನ್ಯಾಯಾಧೀಶರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಲು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸ್ಯಾಂಟ್ರೋ ರವಿಯನ್ನ ಪೊಲೀಸರು ಕೋರ್ಟ್ ಗೆ ಕರೆ ತಂದಿದ್ದರು. ಈ ಸಮಯದಲ್ಲಿ ಸ್ಯಾಂಟ್ರೋ ರವಿ ಇದ್ದ ವಾಹನ ಜೊತೆ ಪೊಲೀಸರ ವಾಹನ ಕೋರ್ಟ್ ಆವರಣದೊಳಗೆ ಪ್ರವೇಶಿಸಿತ್ತು. ಇದರಿಂದಾಗಿ ನ್ಯಾಯಾಧೀಶರ ವಾಹನಗಳು ಓಡಾಡಲು ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪೊಲೀಸರನ್ನ ಕರೆದು , ಕೋರ್ಟ್ ಅವರಣದೊಳಗೆ ಬರಲು ನಿಮಗೆ ಹೇಳಿದ್ದು ಯಾರು ಎಂದು ತರಾಟೆ ತೆಗೆದುಕೊಂಡರು .ಹಾಗೆಯೇ ಎಚ್ಚರಿಕೆ ಕೊಟ್ಟು ವಾಹನವನ್ನ ಹಿಂದಕ್ಕೆ ಕಳುಹಿಸಿದ ಘಟನೆ ನಡೆಯಿತು. ಮೊದಲಿಗೆ ಸಂತ್ರಸ್ಥೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಯುತ್ತಿದ್ದು, ಪೊಲೀಸರ ವರ್ಗಾವಣೆ, ಹೈಟೆಕ್ ವೆಶ್ಯಾವಾಟಿಕೆ ದಂಧೆ, ಪ್ರಭಾವಿ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿಗಿರುವ ಸಂಬಂಧದ ಬಗ್ಗೆ ಸ್ಯಾಂಟ್ರೋ ರವಿಯನ್ನ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ .