ಸ್ಮೈಲ್ ಶ್ರೀನು ಹೊಸ ಚಿತ್ರ ಜನನ   ಸದ್ದಿಲ್ಲದೆ ಪೂರ್ಣ

ಓ ಮೈ ಲವ್ ಚಿತ್ರ ನಿರ್ದೇಶನ  ಮಾಡಿದ್ದ ಸ್ಮೈಲ್ ಶ್ರೀನು  ಇದೀಗ ನಿರ್ಮಾಪಕರಾಗಿದ್ದಾರೆ. ತಮ್ಮದೇ ಸ್ಮೈಲ್ ಜೋಹರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ‘ಜನನ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾ ನಂಟು ಜೊತೆಯಲ್ಲಿ ರಾಜಕಾರಣಕ್ಕೂ ಕಾಲಿರಿಸಿದ್ದು ಎಎಪಿಯಿಂದ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದು ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಎಲ್ಲಾ ಭಾಷೆಯ ಸ್ಟಾರ್ ನಟರು ಚಿತ್ರದಲ್ಲಿ  ಅಭಿನಯಿಸಲಿದ್ದು.  ಮುಂದಿನ ವರ್ಷ ಶ್ರೀನು ಅವರ ಹೊಸ ಬಿಗ್ ಬಜೆಟ್ ಪ್ಯಾನ್ ಇಂಡಿಯಾ  ಸಿನಿಮಾ ಸೆಟ್ಟೇರಲಿದೆ. ಅದಕ್ಕೂ ಮುನ್ನ ಜನನ ಚಿತ್ರ ನಿರ್ಮಾಣಕ್ಕೆ‌ಕೈ ಹಾಕಿದ್ದಾರೆ

ಯುವ ನಿರ್ದೇಶಕ ಮಧುಸೂದನ್ ಆ್ಯಕ್ಷನ್ ಕಟ್ ಹೇಳಿರುವ ಜನನ  ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ.  ನಾಡಿಗೆ ಪ್ರಕೃತಿ ತುಂಬಾ ಮುಖ್ಯ. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ನಿಸರ್ಗವೇ ಭೂಲೋಕದ ಸ್ವರ್ಗ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ

ವರ್ಷಾ ಶೆಟ್ಟಿ ಬೇಬಿ ಮೈರಾ, ಮಾಸ್ಟರ್ ಚಿನ್ಮಯ್, ಬೇಬಿ ಶಾನ್ವಿ, ಬೇಬಿ ಪೂಜಾ, ವರಹ, ಮಂಜುಳಾ, ಕಾವ್ಯ ಹಾಗೂ ಮಂಜು ಸೇರಿದಂತೆ ಬಹುದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಚಿತ್ರದಲ್ಲಿ  ಭರತ್ ಛಾಯಾಗ್ರಹಣ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ ಹೊಸ ವರ್ಷದಲ್ಲಿ ‘ಜನನ’ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವ ಸಾದ್ಯತೆ ಇದೆ.