ಸ್ಮೃತಿ ಇರಾನಿ ಅಕ್ರಮ ಬಾರ್ ಆರೋಪ ಪ್ರತ್ಯಾರೋಪ

ನವದೆಹಲಿ, ಜು.೨೪- ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎನ್ನುವ ವಿಷಯ ರಾಜಕೀಯವಾಗಿ ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ.
ಕಾಂಗ್ರೆಸ್ ಮಾಡಿರುವ ಗಂಭೀರ ಆರೋಪಕ್ಕೆ ತಿರುಗೇಟು ನೀಡಿರುವ ಸ್ಮೃತಿ ಇರಾನಿ, ನಿಮ್ಮನ್ನು ಕಾನೂನು ಮತ್ತು ಜನರ ನ್ಯಾಯಾಲಯದಲ್ಲಿ ನೋಡುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಉಲ್ಲೇಖಿಸಿರುವ ನೋಟಿಸ್‌ನಲ್ಲಿ ಮಗಳ ಹೆಸರು ಎಲ್ಲಿದೆ ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದ ಅವರು, ಸೋನಿಯಾ ಮತ್ತು ರಾಹುಲ್ ಗಾಂಧಿಯವರ ೫,೦೦೦ ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
೨೦೧೪ ಮತ್ತು ೨೦೧೯ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಹೋರಾಡಿದ್ದಾರೆ.ಇದಕ್ಕಾಗಿ ನನ್ನ ಮಗಳನ್ನು ಎಳೆದು ತರಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಧೈರ್ಯ ಮಾಡಿದೆ:
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಅಕ್ರಮವಾಗಿ ನಡೆಸುತ್ತಿರುವ ಕಾಂಗ್ರೆಸ್ ಧೈರ್ಯಮಾಡಿ ಪ್ರದರ್ಶಿಸಿದೆ ಎಂದು ಶಿವಸೇನೆಯ ಸಂಸದೆ ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಎದುರಾದ ಆರೋಪಗಳು ಸಾಮಾನ್ಯ ನಾಗರಿಕರ ವಿರುದ್ಧವಾಗಿದ್ದರೆ ನೀವು ಅದೇ ರೀತಿ ಹೇಳುತ್ತೀರಾ ಎಂದು ಬಳಕೆದಾರಿಗೆ, ಪ್ರಿಯಾಂಕಾ ಚತುರ್ವೇದಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ತನ್ನ ಹಕ್ಕನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ಧೈರ್ಯ ಮಾಡಿದ್ದಾರೆ. ಕೇಂದ್ರ ಸಚಿವರನ್ನು ಹೆಸರಿಸದೆ ಪ್ರಿಯಾಂಕಾ ಚತುರ್ವೇದಿ ಅವರು ಸ್ಮೃತಿ ಇರಾನಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.