ಸ್ಮಾಲ್ ಫಾದರ್ ನೀಟ್ ಕ್ಲಿಯರ್

ರಾಜಸ್ಥಾನ,ಜೂ.೧೯- ತನ್ನ ೧೧ ನೇ ವಯಸ್ಸಿನಲ್ಲಿ ಬಾಲ್ಯ ವಿವಾಹವಾದ ವ್ಯಕ್ತಿಯೊಬ್ಬರು ನೀಟ್ -ಯುಜಿ ಪರೀಕ್ಷೆಗೆ ಕೆಲವೇ ವಾರಗಳು ಇರುವಾಗ ಮಗುವಿನ ತಂದೆಯಾದ ನಂತರ ತನ್ನ ಐದನೇ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ರಾಜಸ್ಥಾನದ ರಾಮಲಾಲ್ ಎಂಬ ವ್ಯಕ್ತಿ ಯಶಸ್ಸಿನ ಕಥೆ ತುಂಬಾ ವಿಭಿನ್ನವಾಗಿದೆ.
೧೧ನೇ ವಯಸ್ಸಿನಲ್ಲಿ ಬಾಲ್ಯದಲ್ಲಿ ಇಷ್ಟವಿಲ್ಲದೆ ಮದುವೆಯಾಗಿದ್ದ ರಾಮಲಾಲ್, ನೀಟ್-ಯುಜಿ ಪರೀಕ್ಷೆ ಬರೆಯುವ ಹಂತದಲ್ಲೇ ಮೊದಲ ಮಗುವಿಗೆ ತಂದೆಯಾದರು. ರಾಜಸ್ಥಾನದ ಚಿತ್ತೂರ್‌ಗಢ್ ಜಿಲ್ಲೆಯ ಘೌಸುಂಡಾದ ನಿವಾಸಿ ೨೦ ವರ್ಷ ವಯೋಮಾನದ ರಾಮಲಾಲ್ ನಾಲ್ಕು ವಿಫಲ ಪ್ರಯತ್ನಗಳ ನಂತರ ತಮ್ಮ ಐದನೇ ಪ್ರಯತ್ನದಲ್ಲಿ ನೀಟ್-ಯುಜಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದಾದ ನಂತರ ವೈದ್ಯನಾಗುವ ಆಸೆಯನ್ನು ವ್ಯಕ್ತಪಡಿಸಿದ ರಾಮಲಾಲ್, ತನ್ನ ಕುಟುಂಬದ ಮೊದಲ ವೈದ್ಯನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ರಾಮಲಾಲ್ ೧೧ ನೇ ವಯಸ್ಸಿನಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾದಾಗ, ಅವರು ಆಗ ೬ ನೇ ತರಗತಿಯಲ್ಲಿ ಓದುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ಮದುವೆಯಾದರೂ, ಹೆಂಡತಿಯಾಗಿ ಬಂದ ತನ್ನ ವಯಸ್ಸಿನ ಹುಡುಗಿಗೆ ಓದುವ ಆಸೆಯನ್ನು ಸ್ಪಷ್ಟವಾಗಿ ತಿಳಿಸಿದ್ದರು. ಆರಂಭದಲ್ಲಿ ರಾಮಲಾಲ್ ತಂದೆ ಇದಕ್ಕೆ ಒಪ್ಪಿರಲಿಲ್ಲ. ಆದರೆ, ದಿನ ಕಳೆದಂತೆ ಮಗನ ಆಸೆಗೆ ಬೆಂಬಲವಾಗಿ ನಿಂತರು.
ಮತ್ತೊಂದೆಡೆ ರಾಮಲಾಲ್ ಪತ್ನಿ ಕೂಡ ೧೦ನೇ ತರಗತಿವರೆಗೆ ಓದಿದ್ದಾಳೆ. ಆರಂಭದಲ್ಲಿ ಅವಳಿಗೂ ತನ್ನ ಪತಿ ಓದುವುದನ್ನು ಮುಂದುವರಿಸಲು ಇಷ್ಟವಿರಲಿಲ್ಲ. ರಾಮ್‌ಲಾಲ್‌ನ ಉತ್ಸಾಹ ಮತ್ತು ಅಧ್ಯಯನ ಮತ್ತು ಪರೀಕ್ಷೆಗಳನ್ನು ಬರೆಯುವ ಹುಮ್ಮಸ್ಸು ಗಮನಿಸಿದ ನಂತರ, ಅವಳು ತನ್ನ ಗಂಡನ ಆಸೆಯನ್ನು ಬೆಂಬಲಿಸಲು ನಿರ್ಧಾರ ಕೈಗೊಂಡಳು. ಅದರ ನಂತರ, ರಾಮಲಾಲ್ ತನ್ನ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದನು ಮತ್ತು ತನ್ನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ೭೪% ಅಂಕಗಳೊಂದಿಗೆ ಉತ್ತೀರ್ಣನಾದನು.
೧೧ ಹಾಗೂ ೧೨ನೇ ತರಗತಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ರಾಮ್‌ಲಾಲ್, ಅದರೊಂದಿಗೆ ನೀಟ್-ಪಿಜಿ ಪರೀಕ್ಷೆಗೆ ಸಿದ್ಧತೆಯನ್ನೂ ಆರಂಭ ಮಾಡಿದ್ದರು.
ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣ: ೨೦೧೯ರಲ್ಲಿ ೧೨ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ರಾಮ್‌ಲಾಲ್ ನೀಟ್-ಪಿಜಿಯ ಮೊದಲ ಪ್ರಯತ್ನ ಮಾಡಿದ್ದರು. ಪರೀಕ್ಷೆಗೆ ಸ್ವತಃ ತಾನೇ ಅಭ್ಯಾಸ ಮಾಡಿಕೊಂಡಿದ್ದ ರಾಮ್‌ಲಾಲ್ ೩೫೦ ಅಂಕ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ೨೦೨೦ರ ನೀಟ್-ಪಿಜಿ ಪರೀಕ್ಷೆಯಲ್ಲಿ ರಾಮ್‌ಲಾಲ್ ೩೨೦ ಅಂಕ ಸಂಪಾದನೆ ಮಾಡಿದ್ದರ. ೨೦೨೧ರ ನೀಟ್-ಪಿಜಿಯಲ್ಲಿ ತನ್ನ ಮೂರನೇ ಪ್ರಯತ್ನ ಮಾಡಿದ್ದ ರಾಮ್‌ಲಾಲ್, ಹಿಂದಿನ ಎರಡೂ ಪರೀಕ್ಷೆಗಿಂತ ಹೆಚ್ಚಿನ ೩೬೨ ಅಂಕ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮೂರನೇ ಪ್ರಯತ್ನದಲ್ಲೂ ವಿಫಲವಾದ ಬಳಿಕ ರಾಮ್‌ಲಾಲ್, ಕೋಟಾದಲ್ಲಿನ ಅಲ್ಲೆನ್ ಅಕಾಡೆಮಿಗೆ ಸೇರ್ಪಡೆಯಾಗಿದ್ದರು. ಅಲ್ಲಿನ ಶಿಕ್ಷಕರು ಹಾಗೂ ಅನುಭವಿಗಳ ಅಡಿಯಲ್ಲಿ ನೀಟ್-ಯುಜಿ ಪರೀಕ್ಷೆಗೆ ಸಿದ್ಧತೆಯನ್ನು ಆರಂಭ ಮಾಡಿದ್ದರು.
ಇದರ ಫಲವಾಗಿ ೨೦೨೨ರ ನೀಟ್-ಯುಜಿಯ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ರಾಮ್‌ಲಾಲ್ ೪೯೦ ಅಂಕ ಸಂಪಾದನೆ ಮಾಡಿದರು.ಆ ಬಳಿಕ ೨೦೨೩ರ ನೀಟ್-ಯುಜಿ ಪರೀಕ್ಷೆಯಲ್ಲಿ ಪಾಸ್ ಆಗಿರುವ ರಾಮ್‌ಲಾಲ್, ಈಗ ಡಾಕ್ಟರ್ ಆಗುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಆರಂಭ ಮಾಡಿದ್ದಾರೆ.