ಸ್ಮಾರ್ಟ್ ಫೋನ್ ವಿತರಣೆ ಕಾರ್ಯಕ್ರಮ ಮಹಿಳೆಯರು ಆಕ್ರೋಶ

ಕಾರಟಗಿ:ಜ:10: ಕೊಪ್ಪಳ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ ಅಭಿಯಾನ ಯೋಜನೆ ಅಡಿಯಲ್ಲಿ ಸ್ಮಾರ್ಟ್ ಫೋನ್ ವಿತರಣೆ ಮತ್ತು ಕೋರೋನಾ ವಾರಿಯರ್ಸ್ ಗೆ ಸನ್ಮಾನ ಸಮಾರಂಭ ಇಂದು ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯಲು ತಡವಾಗಿದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು,
ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟನೆ ಮಾಡಿ, ಕಾರ್ಯಕ್ರಮದಲ್ಲಿ ಸ್ನೇಹ ಆಪ್ ನ ಸ್ಮಾರ್ಟ್ ಪೋನ್ ವಿತರಣೆ ಮಾಡಲಾಗುವುದು,
ಘನ ಉಪಸ್ಥಿತಿಯನ್ನು ಶ್ರೀ ಮತಿ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ವಹಿಸಬೇಕಾಗಿತ್ತು, ಶಾಸಕ ಬಸವರಾಜ್ ದಡೆಸೂಗೂರು ಅಧ್ಯಕ್ಷತೆ ವಹಿಸಿದ್ದು ಮಹಿಳೆಯರ ಆಕ್ರೋಶಕ್ಕೆ ಕಾರಣರಾದರು , ಸಂಸದ ಸಂಗಣ್ಣ ಕರಡಿ,ಗಂಗಾವತಿ ಶಾಸಕ ಪರಣ್ಣ ಮನವಳ್ಳಿ, ಶ್ರೀ ಮತಿ ಅಕ್ಕ ಮಹಾದೇವಿ ಕೆ.ಎಚ್. ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ವೇತಾ ಎಸ್, ಯೋಜನಾಧಿಕಾರಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕನಕಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಟಿ. ಶ್ರೀಧರ್,ಕಾರಟಗಿ ತಾಲೂಕು ಪಂಚಾಯತ್ ಅಧ್ಯಕ್ಷ ಪ್ರಕಾಶ್ ಭಾವಿ, ಪುರಸಭೆ ಅಧ್ಯಕ್ಷ ಶರಣೆಶ್ ಸಾಲೋಣಿ,ಹಾಗೂ ರಾಜಕೀಯ ಮುಖಂಡರು.ಇಲಾಖೆಯ ಸಿಬ್ಬಂದಿಗಳು ಭಾಗವಹಿಸುವ ಕಾರ್ಯಕ್ರಮ ಇದಾಗಿತ್ತು,