ಸ್ಮಾರಕಗಳು ಸಾಂಸ್ಕøತಿಕ ಕುರುಹುಗಳು: ಮೀನಾಕುಮಾರಿ ಬೋರಾಳಕರ

ಬಸವಕಲ್ಯಾಣ:ಎ.20:ಚಾರಿತ್ರಿಕ ಸ್ಮಾರಕಗಳು ದೇಶ-ಕಾಲದ ಸಾಂಸ್ಕøತಿಕ ಕುರುಹುಗಳಾಗಿವೆ. ಹೊಸ ತಲೆಮಾರಿಗೆ ಹಳೆಯ ಸ್ಮಾರಕಗಳು ಮುಕ್ಕಿಲ್ಲದಂತೆ ವರ್ಗಾಯಿಸುವ ಹೊಣೆಗಾರಿಕೆ ಪ್ರತಿಯೊಬ್ಬದರಾಗಿದೆ ಎಂದು ಬಿಕೆಡಿಬಿ ತಹಸಿಲ್ದಾರ್ ಮೀನಾಕುಮಾರಿ ಬೋರಾಳಕರ ಹೇಳಿದರು.

ಡಾ|| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನವು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಯೋಗದೊಂದಿಗೆ ವಿಶ್ವ ಪರಂಪರೆ ದಿನದ ಪ್ರಯುಕ್ತ ನಗರದ ಕೋಟೆಯಲ್ಲಿ ಆಯೋಜಿಸಿದ್ದ 55ನೇ ಉಪನ್ಯಾಸ ಪ್ರಾಚೀನ ಸ್ಮಾರಕಗಳ ಸಂಕಥನ ಮತ್ತು ಸಂರಕ್ಷಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಸವಕಲ್ಯಾಣದ ಕೋಟೆ ಮತ್ತು ಶರಣರ ಸ್ಮಾರಕಗಳು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ.

ಸ್ಥಳೀಯ ಸ್ಮಾರಕಗಳು ಅತಿ ಮೌಲ್ಯ ಹೊಂದಿದ್ದು, ಅವು ಸ್ಥಳೀಯ ಚರಿತ್ರೆಯನ್ನು ವಿಶ್ವಾತ್ಮಕ ನೆಲೆಗೆ ನಿಲ್ಲಿಸಲು ಬಹುದೊಡ್ಡ ಆಕರಗಳಾಗಿವೆ. ಸ್ಮಾರಕಗಳ ರಕ್ಷಣೆಗೆ ಸರಕಾರದ ಜೊತೆಗೆ ಸಾರ್ವಜನಿಕರ ಕಾಳಜಿಯು ಅಗತ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಸಿಯುಕೆ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಬ್ದುಲ್ ಮಾಜಿದ್ ಮಣಿಯಾರ್ ಮಾತನಾಡಿ ಬಸವಾದಿ ಶರಣರಷ್ಟೇ ಸೂಫಿತತ್ವವೂ ಬಸವಕಲ್ಯಾಣದಲ್ಲಿ ಚೈತನ್ಯ ಪಡೆದಿತ್ತು. ಬಹುತ್ವದೊಂದಿಗೆ ಸಹಬಾಳ್ವೆ, ಸಮನ್ವಯತೆಯ ನೆಯ್ಗೆ ಈ ನೆಲದ ಸತ್ವವಾಗಿದೆ.

ಈ ತಲೆಮಾರಿನವರಿಗೆ ನಮ್ಮ ಪರಂಪರೆ ಪ್ರಜ್ಞೆಯ ಅರಿವು ಅಗತ್ಯವಾಗಿದೆ. ಈ ಕೋಟೆಯಲ್ಲಿ ಕಲಾತ್ಮಕತೆ, ಪರ್ಶಿಯನ್ ಕಲೆ, ನಗರದಸ ಶರಣರ ಸ್ಮಾರಕಗಳು ಮತ್ತು ಶರಣ ಸಿದ್ಧಾಂತ, ಶಿವಪುರ ಮತ್ತು ಉಮಾಪೂರದ ಹಳೆಯ ದೇವಾಲಯಗಳು ನಮ್ಮ ದೇಶದ ಬಹುಸಾಂಸ್ಕøತಿಕತೆಯ ಅಸ್ಮಿತೆಯಾಗಿವೆ ಎಂದರು.

ಕೇಂದ್ರಿಯ ವಿವಿ ಪ್ರಾಧ್ಯಪಕ ಮಹಮದ್ ಮೌಸಿನ್ ಖಾನ್ ಮಾತನಾಡಿ ಬಸವಕಲ್ಯಾಣ ಕೋಟೆ ಅತ್ಯಂತ ಪ್ರಾಚೀನವಾದದು. ಅದು ಚಾಳುಕ್ಯರಿಂದ ನಿಜಮನ ಅಳ್ವಿಕೆಯ ಸ್ಥಿತ್ಯಂತರ ಪಡೆದಂತೆ ಅದರ ರಚನೆಯಲ್ಲಿಯೂ ರೂಪಾಂತರವೂಗೊಂಡಿದೆ. ಈ ಕೋಟೆಯ ಚರಿತ್ರೆ, ಶಿಲ್ಪ ಮತ್ತು ರಚನಾ ವಿಧಾನಗಳು ವಿಶ್ವವ್ಯಾಪಿ ಪರಿಚಯಸುವ ಕಾರ್ಯ ಅಗತ್ಯ ಎಂದರು.

ಕಮಲಾಪೂರ ಪ್ರೊಬೇಷನರಿ ತಹಸಿಲ್ದಾರ್ ಮೌಸಿನ್ ಅಹಮದ್ ಮಾತನಾಡಿ ನಮ್ಮ ಮನೆಯ ಹಿರಿಯರಿಗೆ ರಕ್ಷಿಸುವಂತೆ ಸ್ಥಳೀಯ ಸ್ಮಾರಕಗಳನ್ನು ಕಾಪಾಡಬೇಕಾಗಿದೆ. ಹೊಸ ಪಿಳಿಗೆಗೆ ಈ ಸ್ಮಾರಕಗಳನ್ನು ಹಸ್ತಾಂತರಿಸುವ ಮತ್ತು ಅವುಗಳ ಅಸ್ಮಿತೆಯನ್ನು ಪರಿಚಯಿಸಬೇಕಾಗಿದೆ ಎಂದರು.

ಹೈದ್ರಾಬಾದ ಮೌಲಾನಾ ಆಜಾದ್ ಉರ್ದು ರಾಷ್ಟ್ರೀಯ ವಿವಿಯ ಸಹಾಕಯ ಪ್ರಾಧ್ಯಪಕ ಮುಜಾಮಿಲ್ ಖಾದ್ರಿ, ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೆದ್, ನಾಗಪ್ಪ ನಿಣ್ಣೆ, ನ್ಯಾಯವಾದಿ ಪ್ರಕೃತಿ ಬೋರಾಳಕರ, ಮೊಹಮದ್ ಅಲಿ ಖಾನ್, ಶೇರ ಅಲಿ, ಬಷೀರ್ ಅಹ್ಮದ್ ಗೋಬರೆ, ನವಾಜ ಅಹ್ಮದ್, ಅಸಾದುಲ್ಲಾಖಾನ್, ಆಸೀಫ್ ಅಲಿ ಮೊದಲಾದವರಿದ್ದರು.

ಇದೆ ಸಂಧರ್ಭದಲ್ಲಿ ಮೀನಾಕುಮಾರಿ ಬೋರಾಳಕರ ಅವರಿಗೆ ಡಾ|| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ವಿಶೇಷವಾಗಿ ಗೌರವಿಸಲಾಯಿತು.

ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರು. ಡಾ.ಭೀಮಾಶಂಕರ ಬಿರಾದಾರ ಪ್ರಸ್ತಾವಿಕ ಮಾತನಾಡಿದರು. ದೇವೆಂದ್ರ ಬರಗಾಲೆ ನಿರೂಪಿಸಿದರು. ಡಾ. ಶೀವಾಜಿ ಮೇತ್ರೆ ವಂದಿಸಿದರು.