ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹ

ರಾಯಚೂರು,ಜ.೧೬:ಯಕ್ಲಾಸಪೂರು ಗ್ರಾಮ ಶ್ರೀಮಂತರ ಗೈರಾಣಿ ಭೂಮಿಯನ್ನು ಮಾದಿಗ ಸಮುದಾಯಕ್ಕೆ ಸ್ಮಶಾನ ಭೂಮಿಗೆ ಮಂಜೂರು ಮಾಡಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಪಾವಗಡ ಶ್ರೀರಾಮ ಬಣ) ಒತ್ತಾಯಿಸಿದೆ.
ಗ್ರಾಮದ ಶ್ರೀಮಂತ ಸರ್ವೇ ನಂಬರ್ ೭೩/೨ರಲ್ಲಿ ೨.೭ ಎಕರೆ ವಿಸ್ತ್ರೀರ್ಣ ಜಮೀನನ್ನು ಮಾದಿಗ ಸಮುದಾಯದ ಸ್ಮಶಾನ ಭೂಮಿಯಾಗಿ ಮಂಜೂರು ಮಾಡಬೇಕೆಂದು ಸಮಿತಿ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ನೀಡಿ ಒತ್ತಾಯಿಸಿದರು.
ಈ ಪ್ರದೇಶವನ್ನು ಸ್ಮಶಾನ ಭೂಮಿಯನ್ನು ಬಳಸಲು ನೀಡದರೆ ಈ ಭೂಮಿಯಲ್ಲಿ ಸಿಯಾತಲಾಬ್ ಕ್ರಮ ಯಕ್ಲಾಸಪುರ ಕುಲಸುಂಬಿ ಕಾಲೋನಿ, ನಿಜಾಲಿಂಗಪ್ಪ ಕಾಲೋನಿ, ಡ್ಯಾಡಿ ಕಾಲೋನಿ ಬಡಾವಣೆಗಳ ೨೫ ಜನತೆಗೆ ಅನುಕೂಲವಾಗಿದೆ ಎಂದವರು ಸ್ಮಶಾನ ನೀರಿನ ಸೌಲಭ್ಯಕ್ಕೆ ಕೊಳವೆ ಬಾವಿಗಳನ್ನು ವ್ಯವಸ್ಥೆ ಮಾಡಬೇಕು. ಜಿಲ್ಲಡಳಿತ ನಗರ ಸಭೆ ಅನುದಾನದಲ್ಲಿ ಮುಕ್ತಿರಥ ವಾಹನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ನಿಕ್ಷ್ಯಿಸಿದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ವಿಭಾಗೀಯ ಕಾರ್ಯದರ್ಶಿ ಪ್ರಭು ರಾಜ ಮರ್ಚೆಟ್ಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉರುಕುಂದಿ ಸಿಯಾತಲಾಬ್, ಜಿಲ್ಲಾಧ್ಯಕ್ಷರು ಜಿ. ನರಸಿಂಹಿಲು ಮರ್ಚೆಟ್ಹಾಳ, ರಾಜ್ಯ ಉಪಾಧ್ಯಕ್ಷರು ಹೇಮರಾಜ ಆಸ್ಕಿಹಾಳ, ತಾಲ್ಲೂಕು ಉಪಾಧ್ಯಕ್ಷರು ತಾಯಣ್ಣ ಗಧಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉರುಕುಂದಪ್ಪ ಜಿಗ್ಲಿ, ನಗರಾಧ್ಯಕ್ಷರು ನರಸಿಂಹಲು ಪೋತಾಲ್, ಜಿಲ್ಲಾ ಉಪಾಧ್ಯಕ್ಷರು ಲಕ್ಷ್ಮಣ ಕಲ್ಲೂರು ಇತರರು ಇದ್ದರು.