ಸ್ಮಶಾನ ಜಾಗಾ ಅಭಿವೃದ್ದಿಪಡಿಸುವಂತೆ ಆಗ್ರಹ

ವಿಜಯಪುರ, ನ.24-ತಂಗಡಗಿ ಗ್ರಾಮದಲ್ಲಿ ಭೋವಿ ಮತ್ತು ಚಲವಾದಿ ಸಮಾಜದ ಸ್ಮಶಾನ ಜಾಗಾ ಅಭಿವೃದ್ದಿ ಮಾಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಭೀಮ್ ಆರ್ಮಿ ವಿಜಯಪುರ ಜಿಲ್ಲಾ ಉಸ್ತುವಾರಿಗಳಾದ ಪರಶುರಾಮ ಚಲವಾದಿ ಮಾತನಾಡಿ, ತಂಗಡಗಿ ಗ್ರಾಮದಲ್ಲಿ ಭೋವಿ ಮತ್ತು ಚಲವಾದಿ ಸಮಾಜದವರು ಮರಣ ಹೊಂದಿದರೆ ಅವರ ಅಂತ್ಯಕ್ರಿಯೆ ಮಾಡಲು ಸ್ಮಶಾನಕ್ಕೆ ಹೋಗಲು ದಾರಿ ಇರುವದಿಲ್ಲ. ಹಾಗೂ ಅನೇಕ ಬಾರಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಿರುವದಿಲ್ಲ. ಮತ್ತು ಅಧಿಕಾರಿಗಳಿಗೆ ಸ್ವತಹ ನಾವೇ ಕರೆದುಕೊಂಡು ಹೋಗಿ ಜಾಗೆ ತೋರಿಸಿದರು ಇನ್ನು ಯಾವುದೇ ಕಾಮಗಾರಿ ಕೈಗೊಂಡಿರುವದಿಲ್ಲ. ಮತ್ತು ತಂಗಡಗಿ ಗ್ರಾಮದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಸಮಾಜದ ಜನರ ಮೇಲೆ ದಬ್ಬಾಳಿಕೆ (ದೌರ್ಜನ್ಯ) ಮಾಡುತ್ತಿದ್ದು, ದಲಿತ ಸಮಾಜದವರು ಪಂಚಾಯತಿ ಆವರಣದಲ್ಲಿ ಅಂಗಡಿ ಹಾಕಿದರೆ ಪೊಲೀಸ್ ಸ್ಟೇಷನ್‍ಗೆ ದೂರು ನೀಡಿ ನಮ್ಮ ಸಮಾಜದ ಅಂಗಡಿಗಳನ್ನು ಮಾತ್ರ ತೆರಗೊಳಿಸಿರುತ್ತಾರೆ. ಇದೇ ರೀತಿ ತಂಗಡಗಿ ಗ್ರಾಮದ ಪಂಚಯತಿಯಲ್ಲಿ ಜಾತಿ ಬೇದ ಮಾಡುತ್ತಿದ್ದು, ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಹಾಗೂ ಗ್ರಾಮ ಪಂಚಾಯತಿ ಆವರಣದಲ್ಲಿರುವ ದಲಿತ ಸಮಾಜದವರ ಅಂಗಡಿಗಳನ್ನು ತೆರವುಗೊಳಿಸಿದಂತೆ ಉಳಿದ ಸಮಾಜದವರ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು.ಮತ್ತು ಅತೀ ಶೀಘ್ರದಲ್ಲಿ ದಲಿತ ಸಮಾಜದ ಸ್ಮಶಾನ ಜಾಗಾದ ಸುತ್ತಮುತ್ತ ಕಂಪೌಂಡ್ ಗೋಡೆ ನಿರ್ಮಿಸಬೇಕು. ಒಂದುವೇಳೆ ಮಾಡದಿದ್ದಲ್ಲಿ ನಮ್ಮ ದಲಿತ ಸಮಾಜದವರು ಪಂಚಾಯತಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲು ಜಾಲಗೇರಿ, ಪರಶುರಾಮ ಚಲವಾದಿ, ಖಯ್ಯೂಮ ಚೌಧರಿ, ರುದ್ರಪ್ಪ ಚಲವಾದಿ, ಸಂಗು ವಡ್ಡರ, ಮಂಜು ಪೂಜಾರಿ, ಮೈಬೂಬ ಕುಳಗೇರಿ, ಮಲ್ಲಪ್ಪ ಚಲವಾದಿ, ಬಾಬು ಹಾದಿಮನಿ, ಯಲ್ಲಾಲಿಂಗ ಚಲವಾದಿ, ಮಾಂತೇಶ ಚಲವಾದಿ, ಆದರ್ಶ ಶಿವಶರಣ, ಜಗದೀಶ ಬರಡ್ಡಿ ಇನ್ನಿತರರು ಉಪಸ್ಥಿತರಿದ್ದರು.