ಸ್ಮಶಾನ ಒತ್ತುವರಿ ತೆರವಿಗೆ ಡಿಸಿಗೆ  ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಫೆ.27: ನಗರದ  ಆಂದ್ರಾಳ್  ಹಿಂದೂ ಸ್ಮಶಾನ ಭೂಮಿ ಆಕ್ರಮಣ ಮಾಡುವ ಮಾಫಿಯಾ ವಿರುದ್ಧ ಕ್ರಮ‌ ತೆಗೆದುಕೊಳ್ಳಬೇಕು ಎಂದು  ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಗಿದೆ.
ಕಾರ್ಪೊರೇಟರ್ ಎಂ. ರಾಮಾಂಜಿನಿ,  ವಾರ್ಡ್ ಜನತೆ ಮತ್ತು ಆಂದ್ರಾಳು ಸೇವಾ ಸಮಿತಿ ಪದಾಧಿಕಾರಿಗಳು ಈ ಮನವಿ ಸಲ್ಲಿಸಿದರು.
ಸ್ಮಶಾನ ಆಕ್ರಮಣ ಮಾಡಿರುವ ಮಾಫಿಯಾ ವಿರುದ್ಧ ದೂರನ್ನು ಕೊಟ್ಟಿರುವ ವಾರ್ಡ್ ಸದಸ್ಯ  ರಾಮಾಂಜನೇಯಲು ಮತ್ತು ಇತರ ಮೂವರು ಸಾರ್ವಜನಿಕರ ವಿರುದ್ಧ ಜಾತಿ ನಿಂದನೆಯ  ಸುಳ್ಳು ಕೇಸು ಹಾಕಿದ ಬಗ್ಗೆ ಕ್ರಮ ಕೈಗೊಳ್ಳಬೇಕು ಸಹ ಮನವಿ‌ಮಾಡಲಾಗಿದೆ.