ಸ್ಮಶಾನದ ರಸ್ತೆ ದುರಸ್ಥಿಗೆ ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು :ಜು:21: ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬೊಮ್ಮಘಟ್ಟ ಬಳಿ ಬರುವ ಒಂದು ಪುಟ್ಟಗ್ರಾಮ ಜಿಗೇನಹಳ್ಳಿ 250 ಮನೆಗಳಿರುವ ಈ ಗ್ರಾಮದಲ್ಲಿ 800 ಜನ ಸಂಖ್ಯೆ ಹೊಂದಿದ್ದು ಉತ್ತಮ ರಸ್ತೆ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಇರುವ ಕಾರಣ ನೀರಿಗೆ ತೊಂದರೆ ಇಲ್ಲ, ಈ ಗ್ರಾಮಕ್ಕೆ ಕೇವಲ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಈ ಎರಡು ಸೌಲಭ್ಯಗಳ ಕೊರತೆಯಾಗಿದೆ, ತುಂಬರಗುದ್ದಿ ಗ್ರಾಮದ ರಸ್ತೆಗೆ ಜೋಡಿಸುವ ರಸ್ತೆ ಕಚ್ಚಾ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಗ್ರಾಮದ ಚರಂಡಿ ನೀರು ಕೆರೆನೀಡು ಹರಿದು ಹದೆಗೆಟ್ಟಿದ್ದು ಸ್ಮಶಾನಕ್ಕೆ ಹೋಗುವ ರಸ್ತೆ ಇದಾಗಿರುವುದರಿಂದ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವವನ್ನು ಸ್ಮಶಾನಕ್ಕೆ ಸಾಗಿಸುವುದು ಜನತೆಗೆ ವಿಪರೀತ ತೊಂದರೆ ಅನುಭವಿಸಬೇಕಾಗಿರುವುದು ಸಹಜವಾಗಿದೆ.
ಗ್ರಾಮದ ಬಳಿ ನೀರು ಸಂಗ್ರಹ ಗೊಂಡರೆ ದನಕರುಗಳಿಗೆ ತುಂಬಾ ಅನುಕೂಲ, ಅಂತರ್ಜಲ ಮಟ್ಟ ಹೆಚ್ಚಲು ಪ್ರಮುಖ ಕಾರಣ ಗ್ರಾಮದ ಬಳಿ 5 ಕುಂಟು ಮಡಗುವಿನಲ್ಲಿ ಹೂಳು ತುಂಬಿಕೊಂಡಿದೆ ಹೂಳನ್ನು ತೆಗೆಸದಿದ್ದರೆಒತ್ತುವರಿಗೆ ಒಳಗಾಗಿ ಕಾಣದಂತೆ ಮಾಯವಾಗಿ ಕಣ್ಮರೆಯಾಗುತ್ತಿವೆ ಎನ್ನುವ ಅತಂಕವನ್ನು ಗ್ರಾಮಸ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಮೊದಲು ದುರಸ್ತೆ ಮಾಡಿಸಬೇಕಾಗಿದೆ ಇಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲಿದರೆ ಎ.ಎನ್.ಎಂ. ಕೇಂದ್ರವಿರುವುದಿಲ್ಲ, ಚೋರನೂರಿಗೆ ಹೋಗುವ ಪ್ರಮೇಯ ಒದಗಿಬಂದಿದ್ದು ಜನರ ಪರದಾಟದ ಭವಣೆ ಪರಮಾತ್ಮನೇ ಬಲ್ಲ ಇಲ್ಲಿ ಮುಖ್ಯವಾಗಿ ಎ.ಎನ್.ಎಂ.ಕೇಂದ್ರ ಸ್ಥಾಪನೆ ಅತಿ ಅವಶ್ಯಕ
ಇನ್ನೊಂದು ವಿಶೇಷವೇನೆಂದರೆ ಗ್ರಾಮದ ಪಕ್ಕದಲ್ಲಿ ರೈಲು ಗೂಡ್ಸ್ ಗಾಡಿಗಳು ಸಂಚರಿಸುತ್ತಿದ್ದರೂ ಗ್ರಾಮಸ್ಥರಿಗೆ ರೈಲು ಪ್ರಯಾಣ ಭಾಗ್ಯವಿಲ್ಲ, ರೈಲು ಆರಂಭವಾದರೆ ಮಾತ್ರ ಸುತ್ತಲಿನ ಜನತೆಗೆ ಅನುಕೂಲ ಎನ್ನುವ ವಾದವನ್ನು ಪ್ರಗತಿಪರ ರಾಜಶೇಖರ ಪಾಟೀಲ್ ಹಾಗೂ ಕಾಮನಾಯಕರರವರ ಮನದಾಳದ ಮಾತು, ಈ ಗ್ರಾಮ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆತರೆ ಮಾತ್ರ ಗ್ರಾಮ ಸುಂದರ ಮತ್ತು ಆರೋಗ್ಯಯುತವಾಗಿರಲು ಸಾಧ್ಯ ಎನ್ನುವ ಮಾತು ಗ್ರಾಮಸ್ಥರ ಹೃದಯ ತುಂಬಿ ಮನಬಿಚ್ಚಿ ಮಾತನಾಡುತ್ತಾರೆ.