ಸ್ಮಶಾನದಲ್ಲಿ ಗುಂಡಿ ತೋಡಲು ತಕರಾರು: ತಹಶೀಲ್ದಾರ್ ನೇತೃತ್ವದಲ್ಲಿ ಅಂತ್ಯಕ್ರಿಯ

ಸಂಜೆವಾಣಿ ವಾರ್ತೆ
ಹನೂರು ಆ 2: ಕಾಮಗೆರೆ ಗ್ರಾಮದ ಆದಿಜಾಂಬವ ಸಮುದಾಯದ ಕುಳ್ಳಮ್ಮ (90) ಎಂಬ ವಯೋವೃದ್ಧೆ ನಿಧನರಾಗಿದ್ದು ಶವವನ್ನು ಊಳಲು ಗುಂಡಿ ತೆಗೆಯುತ್ತಿದ್ದಾಗ ಸ್ತಳೀಯ ಖಾಸಗಿ ವ್ಯಕ್ತಿ ತನ್ನ ಜಾಗದಲ್ಲಿ ಗುಂಡಿ ತೋಡುತ್ತಿದ್ದಾರೆ ಎಂದ ಗುಂಡಿ ತೋಡುವುದನ್ನು ತಡೆದಿರುವ ಘಟನೆ ಜರುಗಿದೆ.
ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ಕಾಮಗೆರೆ ಗ್ರಾಮದ ಆದಿ ಜಾಂಬವ ಸಮುದಾಯದ ಕುಳ್ಳಮ್ಮ ಎಂಬ ವಯೋವೃದ್ಧೆ ನಿಧನರಾಗಿದ್ದರು. ಬೆಳಿಗ್ಗೆ 9.30ರ ಸಮಯದಲ್ಲಿ ಸ್ಮಶಾನದಲ್ಲಿ ಗುಂಡಿ ತೆಗೆಯುತ್ತಿದ್ದಾಗ ಗ್ರಾಮದ ಫಿಲಿಪ್ (ನಾಗರಾಜು) ಎಂಬ ವ್ಯಕ್ತಿ ಇದು ನನಗೆ ಸೇರಿದ ಜಾಗ ಎಂದು ಗುಂಡಿ ತೆಗೆಯುವುದನ್ನು ತಡೆದು ತಕರಾರು ಮಾಡಿದ್ದಾರೆ.
ಈ ವೇಳೆ ಸಮುದಾಯದ ಮುಖಂಡರುಗಳು ಹನೂರು ತಾಲೂಕು ತಹಸಿಲ್ದಾರ್ ಗುರುಪ್ರಸಾದ್ ರವರಿಗೆ ಮತ್ತು ಪೆÇಲೀಸ್ ಠಾಣೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಮಶಾನ ಸ್ಥಳಕ್ಕೆ ಆಗಮಿಸಿದ ಹನೂರು ತಹಸಿಲ್ದಾರ್ ಗುರುಪ್ರಸಾದ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಫಿಲಿಪ್ ಎಂಬ ವ್ಯಕ್ತಿ ಇದು ನನಗೆ ಸೇರಿದ ಜಾಗ ಇಲ್ಲಿ ಸ್ಮಶಾನಕ್ಕೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಕಾರಾರು ತೆಗೆದಿದ್ದಾರೆ.
ಆರಿಜಾಂಬವ ಸಮುದಾಯದ ಯಜಮಾನರು ಮುಖಂಡರು ಹಾಗೂ ಪಿಲೀಫ್ (ನಾಗರಾಜು) ಇವರುಗಳನ್ನು ಸೇರಿಸಿ ಮಾತುಕತೆ ನಡೆಸಿ ನಂತರ ಶವವನ್ನು ಅಂತ್ಯಸಂಸ್ಕಾರ ಮಾಡಲು ಅನುವು ಮಾಡಿಕೊಟ್ಟರು. ಪೆÇೀಲೀಸ್ ಅಧಿಕಾರಿಗಳು ಸ್ಮಶಾನ ಸ್ಥಳದಲ್ಲಿ ಗುಂಡಿ ತೆಗೆದು ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನೆರವೇರುವವರೆಗೂ ಇದ್ದರು.
ಹನೂರು ತಾಲೂಕು ತಹಸಿಲ್ದಾರ್ ಗುರುಪ್ರಸಾದ್ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನಂತರ ಸ್ಮಶಾನ ಜಾಗ ಮತ್ತು ಖಾಸಗಿ ವ್ಯಕ್ತಿಯ ಜಾಗಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿ. ನಂತರ ಸಂಬಂಧಪಟ್ಟವರಿಗೆ ಜಾಗವನ್ನು ಬಿಟ್ಟುಕೊಡಲು ಸ್ಥಳ ಗುರುತು ಮಾಡಲಾಗುವುದು. ಅಲ್ಲಿಯವರೆಗೆ ಯಾವುದೇ ರೀತಿ ಯಾರು ತಕರಾರು ಮಾಡಿಕೊಳ್ಳದಂತೆ ತಿಳಿಸಿದರು.