ಸ್ಮಶಾನಗಳ ಅಭಿವೃದ್ಧಿ ಕ್ರಮ- ಚಲಪತಿ

ಕೋಲಾರ,ಏ.೮: ಕೇಂದ್ರ ಮತ್ತು ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಲ್ಲಿ ಇರುವುದರಿಂದ ಕೆಜಿಎಫ್ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡುವುದಕ್ಕೆ ಸಂಬಂದ ಪಟ್ಟ ಸಚಿವರುವನ್ನ ಮಾಜಿ ಶಾಸಕ ವೈ.ಸಂಪಂಗಿ ಭೇಟಿ ಮಾಡಿ ವಿಶೇಷ ಅನುದಾನವನ್ನು ತಂದು ಅಭಿವೃದ್ದಿ ಮಾಡುತ್ತಿದ್ದಾರೆ ಎಂದು ದೊಡ್ಡಕಾರಿ ಗ್ರಾಪಂ ಸದಸ್ಯ ಚಲಪತಿ ಹೇಳಿದರು.
ನಗರದ ಹುಲ್ಕೂರು ಗ್ರಾಪಂಯ ನಯನಹಳ್ಳಿ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಕ್ಕೆ ಪೂಜೆ ಮಾಡಿ ಸಿಹಿ ಅಂಚುವ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಕೆಜಿಎಫ್ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ವಿಶೇಷ ಅನುದಾನದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಶಾಸಕ ವೈ.ಸಂಪಂಗಿ ಅವರು ನೇತೃತ್ವದಲ್ಲಿ ಆನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ದಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ದೊಡ್ಡ ಕಾರಿ ಗ್ರಾಪಂ ಸದಸ್ಯರಾದ ಚಲಪತಿ, ಗೋಪೆನಹಳ್ಳಿ ಜೆಸಿಬಿ ಮುನಿಯಪ್ಪ, ಮಲ್ಲಹಳ್ಳಿ ಹರೀ, ಗ್ರಾಮದ ಮುಖಂಡರಾದ ಮಂಜುನಾಥ್ ರೆಡ್ಡಿ, ಗಂಗಿರೆಡ್ಡಿ, ರಘುರಾಮರೆಡ್ಡಿ, ಬೀರಪ್ಪ, ವೆಂಕಟೇಶ್, ಸುರೇಶ್, ದುವಪ್ಪ, ನಾರಾಯಣಸ್ವಾಮಿ, ತಿಪ್ಪಣ್ಣ, ಕೃಷ್ಣಮೂರ್ತಿ, ಮನು, ಶ್ರೀನಿವಾಸ್ ಮತ್ತಿತ್ತರು ಇದ್ದರು.