ಸ್ಮಶಾನಕ್ಕೆ ಮೀಸಲಿಟ್ಟ ಜಾಗ ತೆರವು

ವಿಜಯಪುರ, ಏ. 24- ವಿಜಯಪುರ ವ್ಯಾಪ್ತಿಯ ಕೊಂಡೇನಹಳ್ಳಿ ಗ್ರಾಮದ ಸರ್ವೇ ನಂಬರ್ ಒಂದರಲ್ಲಿ ೩ಎಕರೆ ಮೂವತ್ತು ಗುಂಟೆ ಜಾಗವನ್ನು ಹಿಂದಿನ ಜಿಲ್ಲಾಧಿಕಾರಿಗಳು ವಿಜಯಪುರ ಪಟ್ಟಣದ ಸಾರ್ವಜನಿಕರ ಸ್ಮಶಾನಕ್ಕಾಗಿ ಖಾತೆ ಸಹ ಮಾಡಿದ್ದು, ಹಾಗೂ ಕೋರಮಂಗಲ, ಗುಡುವನಹಳ್ಳಿ ಗ್ರಾಮಗಳಿಗೆ ಸೇರಿದ ಸರ್ವೆ ನಂಬರ್ ೫೪ ರಲ್ಲಿ ೧ ಎಕರೆ ಹನ್ನೊಂದು ಗುಂಟೆ ಸ್ಮಶಾನಕ್ಕಾಗಿ ಕಾಯ್ದಿಟ್ಟ ಜಾಗವನ್ನು ಸರ್ವೇ ಮಾಡಿಸಿ ತೆರವುಗೊಳಿಸಿ, ಕಾಂಪೌಂಡ್ ನಿರ್ಮಿಸಬೇಕೆಂದು, ಬೆಂ.ಗ್ರಾ.ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚಿಸಿದರು.
ಅವರು ಕೋರಮಂಗಲ ಗ್ರಾಮದ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಪರಿಶೀಲಿಸಿ, ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಸುನೀಲ್ ಕುಮಾರ್ ಅರೋಲಿಕರ್ ವಿಜಯಪುರ ನಾಡ ಕಚೇರಿ ರಾಜಸ್ವನಿರೀಕ್ಷಕರಾದ ಸಿ.ವೈ.ಕುಮಾರ್, ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಮುನಿರಾಜು, ದಫೇದಾರ್ ನಾಗೇಶ್, ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ತಕ್ಷಣ ಫಲಿತಾಂಶ;-ಜಿಲ್ಲಾಧಿಕಾರಿ ಶ್ರೀನಿವಾಸ್‌ರವರ ಸೂಚನೆಯ ಮೇರೆಗೆ ತಕ್ಷಣ ಕ್ರಮಕೈಗೊಂಡ ಸಿ.ವೈ.ಕುಮಾರ್‌ರವರು ಮೋಜಿಣಿದಾರರೊಂದಿಗೆ ಮದ್ಯಾಹ್ನ ೩ ಗಂಟೆಗೆ ಸರ್ವೇ ಮಾಡಿಸಿ, ಸದರಿ ಜಮೀನನ್ನು ಪುರಸಭಾ ಅಧಿಕಾರಿಗಳೊಂದಿಗೆ ಗಡಿ ಗುರುತಿಸಿ, ಹಸ್ತಾಂತರಿಸಿದರುಜ