ಸ್ಮರಣ ಸಂಚಿಕೆ ವಿಶಿಷ್ಟ ಅನಾವರಣಕ್ಕೆ ಶ್ರಮಿಸೋಣ

ಶಹಾಪುರ:ಫೆ.2: ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆಬ್ರುವರಿ ಕೊನೆಯ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿರುವ ನಾಲ್ಕನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯು ತಾಲೂಕಿನ ಸಾಂಸ್ಕøತಿಕ ಲೋಕದ ಮೇಲೆ ಬೆಳಕು ಚೆಲ್ಲುವ ತಾಲೂಕಿನ ಸಾಹಿತಿಗಳು, ಚಿಂತಕರ, ಸಂಶೋಧಕರ, ಯುವಬರಹಗಾರರ ವೈವಿಧ್ಯಮಯ ಲೇಖನಗಳು, ಕವಿತೆಗಳು ನೀಡುವುದರ ಮೂಲಕ ಸ್ಮರಣ ಸಂಚಿಕೆ ವಿಶಿಷ್ಟವಾಗಿ ಅನಾವರಣಗೊಳ್ಳಲು ಪ್ರಧಾನ ಸಂಪಾದಕರು ಹಾಗೂ ಸಂಪಾದಕ ಮಂಡಳಿಯೊಂದಿಗೆ ಶ್ರಮಿಸೋಣ ಎಂದು ತಾಲೂಕಾ ಕ.ಸಾ.ಪ. ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಸಮ್ಮೇಳನದ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಆಯ್ಕೆಯಾದ ಸಾಹಿತಿ ಬಸವರಾಜ ಸಿನ್ನೂರ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ಸಮ್ಮೇಳನದ ಯಶಸ್ವಿಗೆ ಎಲ್ಲಾ ಕನ್ನಡದ ಮನಸ್ಸುಗಳು ಕೂಡಿ ಕೆಲಸ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್, ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ, ಸಂಶೋಧಕ ಮೊನಪ್ಪ ಶಿರವಾಳ, ವಿಮರ್ಶಕ ಸಿ.ಎಸ್. ಭೀಮರಾಯ, ಸಾಹಿತಿ ಭೀಮಪ್ಪ ಭಡಾರಿ, ಪಂಚಾಕ್ಷರಯ್ಯ ಹಿರೇಮಠ, ಈಶ್ವರ ಗೋನಾಳ, ಮಹಿಳಾ ಸಾಹಿತಿಗಳಾದ ರೇಣುಕಾ ಚಟ್ರಿಕಿ, ಭಾಗ್ಯ ದೊರೆ, ಕಾವೇರಿ ಪಾಟೀಲ, ಶಕುಂತಲಾ ಹಡಗಲಿ, ಕಾರ್ಯಕಾರಿ ಸಮಿತಿ ಸದಸ್ಯರಾದ ದೇವಿಂದ್ರಪ್ಪ ವಿಶ್ವಕರ್ಮ, ಕ.ಸಾ.ಪ. ಕೋಶಾಧ್ಯಕ್ಷ ಶಂಕರ ಹುಲ್ಕಲ್(ಕೆ), ನಿಂಗಣ್ಣ ತಿಪ್ಪನಳ್ಳಿ, ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ, ರಾಘವೇಂದ್ರ ಹಾರಣಗೇರಾ ಮುಂತಾದವರು ಸ್ಮರಣ ಸಂಚಿಕೆಯ ಸ್ವರೂಪ ಹಾಗೂ ಸಂಪಾದಕೀಯ ಮಂಡಳಿಯ ರಚನೆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.