ಸ್ಮತಿ ಇರಾನಿಗೆ ಕೊರೋನಾ

ನವದೆಹಲಿ, ಅ‌.28- ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಸೋಂಕು ದೃಡಪಟ್ಟಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ತಮಗೆ ಯಾವುದೇ ರೋಗಲಕ್ಷಣ ಇಲ್ಲ. ಸೋಂಕು ದೃಡ ಪಟ್ಟಿದ್ದು ಮನೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಅವರು ಹೇಳಿದ್ದಾರೆ

ನಿನ್ನೆಯಷ್ಟೇ ಮತ್ತೊಬ್ಬ ಕೇಂದ್ರದ ಸಚಿವ ರಾಮದಾಸ್ ಅಠವಾಳೆ ಅವರಿಗೆ ಸೋಂಕು ತಗುಲಿತ್ತು.

ಈಗಾಗಲೇ ಕೇಂದ್ರ ಸಚಿವರಾದ ಅಮಿತ್ ಶಾ,ನಿತಿನ್ ಗಡ್ಕರಿ,ದರ್ಮೇಂದ್ರ ಪ್ರಧಾನ್, ಸೇರಿದಂತೆ ಅನೇಕ ಸಚಿವರು ಸೋಂಕಿನಿಂದ ಚಿಕಿತ್ಸೆ ಪಡೆ್ದಿದು ಗುಣ ಮುಖ ರಾಗಿದ್ದಾರೆ

ದೇಶದಲ್ಲಿ 80 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.