ಸ್ಫುಟ್ನಿಕ್ ಲಸಿಕೆ ಪ್ರಯೋಗ ಯಶಸ್ವಿ

ಮಾಸ್ಕೋ, ನ. ೧೨- ಅಮೆರಿಕಾದ ಔಷಧ ತಯಾರಿಕಾ ಸಂಸ್ಥೆ ಫಿಫಿಜರ್ ತನ್ನ ಲಸಿಕೆಯ ಮೂರನೇ ಹಂತದ ಪ್ರಯೋಗ ಶೇ. ೯೦ ರಷ್ಟು ಯಶಸ್ವಿಯಾಗಿದೆ ಎಂದು ಪ್ರಕಟಿಸಿದ ಕೆಲದಿನಗಳ ನಂತರ, ರಷ್ಯಾ ಅಭಿವೃದ್ಧಿಪಡಿಸಿರುವ ಸ್ಫುಟ್ನಿಕ್ – ವಿ ಲಸಿಕೆ ಶೇ. ೯೦ಕ್ಕೂ ಅಧಿಕ ಯಶಸ್ವಿ ಕಂಡಿದೆ ಎಂದು ಪ್ರಕಟಿಸಿದೆ.
ಒಮ್ಮೆ ಲಸಿಕೆ ಸಿದ್ಧವಾಗುತ್ತಿದ್ದಂತೆ ಅದನ್ನು ಮತ್ತೊಮ್ಮೆ ಪರೀಕ್ಷಿಸಿ ಉತ್ಪಾದನೆಗೆ ಗಮನಹರಿಸುವುದಾಗಿ ರಷ್ಯಾ ಸರ್ಕಾರ ಹೇಳಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಮೆರಿಕಾದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಫಿಫಿಜರ್ ಮತ್ತು ಬಯೋನ್ ಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆ ಶೇ. ೯೦ ರಷ್ಟು ಯಶಸ್ವಿಯಾಗಿದೆ ಎಂದು ಹೇಳಿಕೆ ನೀಡಿತ್ತು.
ರಷ್ಯಾದ ಗಮಾಲಿಯಾ ರಾಷ್ಟ್ರೀಯ ಸೋಂಕು ಕೇಂದ್ರ ಮತ್ತು ಸೂಕ್ಷ್ಮ ಜೀವಶಾಸ್ತ್ರ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಫುಟ್ನಿಕ್ – ವಿ ಶೇ. ೯೨ಕ್ಕೂ ಹೆಚ್ಚು ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದುವರೆಗೂ ಸ್ಫುಟ್ನಿಕ್ – ವಿ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದಕ್ಷತೆ ಇದೆ ಎನ್ನುವುದನ್ನು ಗಮಾಲಿಯಾ ಔಷಧಿ ತಯಾರಿಕಾ ಸಂಸ್ಥೆ ಈ ವಿಷಯ ಹೊರಹಾಕಿದೆ.
ಜಗತ್ತಿನಲ್ಲಿ ಸೋಂಕಿಗೆ ಶೇ. ೫೦ಕ್ಕೂ ಅಧಿಕ ಔಷಧ ತಯಾರಿಕಾ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸುವ ಕಾಯಕದಲ್ಲಿ ನಿರತವಾಗಿವೆ. ಅದರಲ್ಲಿ ಕೆಲಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಲಸಿಕೆ ಅಂತಿಮ ಹಂತಕ್ಕೆ ಬಂದಿದೆ ಎಂದು ಗಮಾಲಿಯಾ ಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಗಮಾಲಿಯಾ ಔಷಧ ತಯಾರಿಕಾ ಸಂಸ್ಥೆ ರಷ್ಯಾದ ನೇರ ಬಂಡವಾಳ ನಿಧಿ ಸಹಕಾರದೊಂದಿಗೆ ಲಸಿಕೆಯನ್ನು ಅಭಿವೃದ್ದಿಪಡಿಸಿದೆ. ಸದ್ಯ ಇದರ ಅಂತಿಮ ಹಂತದ ಪ್ರಯೋಗ ನಡೆಯುತ್ತಿದೆ.
ಶೀಘ್ರದಲ್ಲೇ ಫಲಿತಾಂಶವು ಹೊರಬೀಳಲಿದೆ ಎಂದು ಗಮಾಲಿಯಾ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ತಾನು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ರಷ್ಯಾ ಒಮ್ಮೆ ೧೬ ಸಾವಿರ ಮಂದಿಯ ಮೇಲೆ ಹಾಗೂ ಮತ್ತೊಮ್ಮೆ ೪೦ ಸಾವಿರ ಮಂದಿಯ ಮೇಲೆ ಸ್ಫುಟ್ನಿಕ್ ವಿ ಲಸಿಕೆಯನ್ನು ಮಾಡಿತ್ತು. ಅದರಲ್ಲಿ ಬಹುತೇಕ ಯಶಸ್ವಿಯಾಗಿರುವುದಾಗಿ ತಿಳಿಸಿದೆ.