ಸ್ಪೋಕನ್ ಇಂಗ್ಲಿಷ್ – ಗ್ರಾಮರ್ ತರಗತಿ ಶಿಬಿರ

ಚಿತ್ರದುರ್ಗ. ಜೂ.೭;ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಫೌಂಡೇಷನ್ (ರಿ.), ಚಿತ್ರದುರ್ಗ ವತಿಯಿಂದ ಒಂದು ತಿಂಗಳ ವಿಶೇಷ ‘ಸ್ಪೋಕನ್ ಇಂಗ್ಲಿಷ್ – ಗ್ರಾಮರ್ ತರಗತಿ ಶಿಬಿರ’ ಜೂನ್ 10 ರಿಂದ ಆನ್ಲೈನ್ ನಲ್ಲಿ ಪ್ರಾರಂಭವಾಗುತ್ತಿದೆ. ಲೇಖಕರು ಹಾಗು ಆಳ್ವಾಸ್ ಸೇರಿದಂತೆ ಅನೇಕ ಹೆಸರಾಂತ ಕಾಲೇಜುಗಳಲ್ಲಿ  ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಶ್ರೀ ಯೋಗೀಶ್ ಸಹ್ಯಾದ್ರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿಗಳನ್ನು ಗೂಗಲ್ ಮೀಟ್ ಮೂಲಕ ನಡೆಸಿಕೊಡಲಿದ್ದಾರೆ. ಒಂದು ಬ್ಯಾಚ್ ನಲ್ಲಿ ಕೇವಲ 10 – 15 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು.
5 ನೇ ತರಗತಿಯಿಂದ ಯಾವುದೇ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಕೇವಲ 1,000/- (ಒಂದು ಸಾವಿರ ರೂಪಾಯಿ) ಮಾತ್ರ ಪಾವತಿಸಿ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಚೈತ್ರ.ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಮೊ : 9972240239 / 9964376364 ನಲ್ಲಿ ಅಥವ ಇಮೇಲ್ : speceducationtrust@gmail.com ಮೂಲಕ ಸಂಪರ್ಕಿಸಬಹುದಾಗಿದೆ.