ಸ್ಪೈಸಿ ಚಿಕನ್ ವಿಂಗ್ಸ್

ಬೇಕಾಗುವ ಸಾಮಗ್ರಿಗಳು
*ಚಿಕನ್ ವಿಂಗ್ಸ್ – ೪
*ಮೊಟ್ಟೆ – ೧
*ವಿನಿಗರ್ – ೧ ಟೀ ಸ್ಪೂನ್
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಟೀ ಸ್ಪೂನ್
*ಧನಿಯಾ ಪುಡಿ – ೨ ಟೀ ಸ್ಪೂನ್
*ಅಚ್ಚಖಾರದ ಪುಡಿ – ೨ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಮೊಸರು – ೧ ಚಮಚ
*ಕಾರ್ನ್‌ಫ್ಲೋರ್ – ೨-೩ ಟೇಬಲ್ ಸ್ಪೂನ್
*ಎಣ್ಣೆ – ಕರಿಯಲು

ಮಾಡುವ ವಿಧಾನ :

ಬೌಲ್‌ಗೆ ಚಿಕನ್ ವಿಂಗ್ಸ್ ಜೊತೆಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ವಿನಿಗರ್, ಮೊಸರು, ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಮೊಟ್ಟೆ, ಕಾರ್ನ್‌ಫ್ಲೋರ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕಾದ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿದರೆ ರುಚಿಯಾದ ಸ್ಪೈಸಿ ಚಿಕನ್ ವಿಂಗ್ಸ್ ಸವಿಯಲು ರೆಡಿ.