ಸ್ಪೇಸ್ ಆನ್ ವೀಲ್ಸ್ “  ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.14: ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಕಂಪ್ಯೂಟರ್ ಸೊಸೈಟೀ ಆಫ್ ಇಂಡಿಯ ಸಿ.ಎಸ್.ಐ.ವಿದ್ಯಾರ್ಥಿ ಘಟಕ,  ಕಂಪ್ಯೂಟರ್ ಇಂಜಿನೀರಿಂಗ್ ವಿಭಾಗ,  ಬೆಂಗಳೂರಿನ ಯು.ಆರ್.ರಾವ್ ಸ್ಯಾಡಿಲೈಟ್ ಸೆಂಟರ್, ಇವರಿಂದ “ಸ್ಪೇಸ್ ಆನ್ ವೀಲ್ಸ್ “  ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯೂ.ಆರ್.ರಾವ್ ಸ್ಯಾಟಿಲೈಟ್ ಸೆಂಟರ್, ಬೆಂಗಳೂರಿನಿಂದ ಇಸ್ರೋ ವಿಜ್ಞಾನಿ- ಶ್ರೀನಿವಾಸ್ ಹೆಚ.ಎಲ್, ಮಾತನಾಡುತ್ತ “ ಉಪಗ್ರಹ ಉಡಾವಣೆ ಯಲ್ಲಿ ಎಲ್ಲಾ ವಿಭಾಗಗಳ ಇಂಜಿನೀರುಗಳ ಅವಶ್ಯಕತೆಯಿದೆ, ಹಾಗೂ ಶೇ.100 ರಷ್ಟು ಎಲ್ಲವನ್ನು ಸರಿಯಾಗಿ ನಿಭಾಯಿಸಬೇಕಾತ್ತದೆ, ಇಂಜಿನೀರು ವಿದ್ಯಾರ್ಥಿಯವರಿಗೆ ಕಲಿಕಾಹಂತದಲ್ಲೆ, ಪ್ರಾಯೋಗಿಕ ತಿಳುವಳಿಕೆ ನೀಡಲು ಇಸ್ರೋ ಸ್ಪೇಸ್ ಆನ್ ವಿಲ್ಸ್ ನ್ನು ಪರಿಚಯಿಸಿದೆ ”ಎಂದು ವಿವರಿಸಿದರು. ,ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಮಾತನಾಡುತ್ತ “ನೀವು ಉತ್ತಮ ಇಂಜಿನೀರ್ ಮತ್ತು ವೈಜ್ಞಾನಿಕ ಮನೋಭಾವನವನ್ನು ಹೊಂದಲು ಬಯಸಿದರೆ ಈ ರೀತಿಯ ಕಾರ್ಯಕ್ರಮಗಳು ತುಂಬಾಸಹಾಯಕ ವಾಗಿವೆ, ವಿಜ್ಞಾನಿಕ ಅಂಶಗಳ ಬಗ್ಗೆ ಹೆಚ್ಚಿನ ಓಳನೋಟವನ್ನು ಹೊಂದಿರಬೇಕು, ಅವುಗಳನ್ನು ಸಮಾಜಕ್ಕೆ ತುಲಪುವ ಪ್ರಯತ್ನ ಮಾಡಬೇಕು ” ಎಂದರು,
ಸಿ.ಎಸ್.ಐ.ವಿದ್ಯಾರ್ಥಿ ಘಟಕ- ಮುಖ್ಯಸ್ಥೆ ಡಾ||ಸ್ವಪ್ನಾಕುಲಕರ್ಣಿ, ಮಾತನಾಡುತ್ತ  “ ಈ ರೀತಿಯ ಕಾರ್ಯಕ್ರಮಗಳಿಂದ ನಾವು ವಿದ್ಯಾರ್ಥಿಯವರಲ್ಲಿ ವೈಜ್ಞಾನಿಕ ಮನೋಭಾವವನ್ನು ಪ್ರೇರಣೆ ನೀಡಿ ಅವರಿಂದ ಸಮಾಜದ ಜೀವನವನ್ನು ಸುಲಭಗೋಳಿಸಲು ನವೀನ ಅಪ್ಲಿಕೇಷನ್ಸ್ ಮಾಡಲು ಸಹಾಯವಾಗುತ್ತವೆ  ” ಎಂದರು, ಪ್ರಾಂಶುಪಾಲರು  ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಶ್ರೀಮತಿ ಸವಿತಾ ಸೊನೋಳಿ, ಮಾತನಾಡುತ್ತ “ ನಮ್ಮ ಕಾಲೇಜಿನ ಅನೇಕ ಕಾರ್ಯ ಚಟುವಟಿಕೆಗಳನ್ನು ಮಾಡಿದ್ದೇವೆ, ವಿದ್ಯಾರ್ಥಿಗಳಿಗೆ ಎಲ್ಲಾರೀತಿಯ ವ್ಯವಸ್ಥೆಯನ್ನು ಕಲ್ಪಸಲಾಗಿದೆ, ತಂತ್ರಜ್ಞಾನದ ಯುಗದಲ್ಲಿ ಇಸ್ರೋಸಾಧನೆಯ ಮಾಹಿತಿ ವಿದ್ಯಾರ್ಥಿಗಳಿಗೆ ಆವಶ್ಯ ” ಎಂದರು.
ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ  ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಕೊರ್ಲಗುಂದಿ ಬಸವನ ಗೌಡ, ಡೀನ್-ಅಕಾಡಮಿಕ್ ಡಾ|| ಹೆಚ್.ಗಿರೀಷ್, ಸಿ.ಎಸ್.ಐ.ವಿದ್ಯಾರ್ಥಿ ಘಟಕ- ಮುಖ್ಯಸ್ಥೆ ಡಾ||ಸ್ವಪ್ನಾಕುಲಕರ್ಣಿ, ಡಾ|| ಅನುರಾಧ.ಎಸ್.ಜಿ., ಡಾ||ಸಿ.ತೋಟಪ್ಪ ಹಾಗೂ ಅವರ ತಂಡ-ಬೆರ್ಗಿ ವೀರೇಶ ಗೌಡ, ಶ್ರೀಮತಿವಿನುತ, ಶ್ರೀಮತಿ ಡಾ|| ಸಾಯಿಮಾಧವಿ, ಡಾ||ಸುಮಂಗಳ, ಶಿವಪ್ಪ  ಇನ್ನಿತರ ಕಾಲೇಜಿನ ಸಿಬ್ಬಂಧಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.