ಸ್ಪೇಸ್‌ಜೆಟ್ ವಿಮಾನದಲ್ಲಿ ಬೆಂಕಿ

ನವದೆಹಲಿ,ಜು.೨೬-ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಿರ್ವಹಣಾ ಕಾರ್ಯದ ವೇಳೆ ಸ್ಪೇಸ್‌ಜೆಟ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್, ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಸ್ಪೇಸ್‌ಜೆಟ್ ಏರ್‌ಲೈನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಎಟಿಆರ್ ವಿಮಾನದ ನಿರ್ವಹಣಾ ಕಾರ್ಯ ಪ್ರಗತಿಯಲ್ಲಿದ್ದಾಗ, ಇಂಜಿನಿಯರ್‌ಗಳಲ್ಲಿ ಒಂದು ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಎಂಜಿನಿಯರ್‌ಗಳು ಗಮನಿಸಿದರು. ಕೂಡಲೇ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸಲಾಯಿತು. ಈ ಘಟನೆಯನ್ನು ಟ್ಯಾಕ್ಸಿವೇಯಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಡಿಜಿಸಿಎ ವಿಮಾನ ಅಗ್ನಿ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದೆ.