ಬೇಕಾಗುವ ಸಾಮಗ್ರಿಗಳು
- ಬದನೆಕಾಯಿ – ೪
- ಅಕ್ಕಿ – ೧/೪ ಕೆ.ಜಿ
- ಅನಾನಸ್ ಹೂ – ೩ ಪೀಸ್
- ಜಾಪತ್ರೆ ಹೂ – ೨
- ಏಲಕ್ಕಿ – ೩
- ಲವಂಗ – ೮
- ಚಕ್ಕೆ – ೩
- ಈರುಳ್ಳಿ – ೨
- ತುಪ್ಪ – ೧ ಚಮಚ
- ಪುದೀನ ಸೊಪ್ಪು – ೨
- ಮೆಂತ್ಯ ಸೊಪ್ಪು – ೨
- ಕೊತ್ತಂಬರಿ ಸೊಪ್ಪು – ೨
- ಶುಂಠಿ- ಬೆಳುಳ್ಳಿ ಪೇಸ್ಟ್ – ೧ ಚಮಚ
- ದಪ್ಪ ಮೆಣಸಿನಕಾಯಿ – ೧
- ಹಸಿ ಬಟಾಣಿ – ೧೦೦ ಗ್ರಾಂ
- ಗರಂ ಮಸಾಲ – ೧ ಚಮಚ
- ಧನಿಯಾ ಪುಡಿ – ೧ ಚಮಚ
- ಅಚ್ಚಖಾರದ ಪುಡಿ _ ೧ ಚಮಚ
- ಟೊಮ್ಯಾಟೊ- ೧
- ತೆಂಗಿನ ಕಾಯಿ ತುರಿ – ೧ ಚಮಚ
- ನಿಂಬೆರಸ – ೧ ಚಮಚ
- ಎಣ್ಣೆ – ೨೦೦ ಮಿ.ಲೀ
- ನೀರು
- ಅರಿಶಿನಪುಡಿ
ಮಾಡುವ ವಿಧಾನ
ತೆಂಗಿನಕಾಯಿ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿ, ತೆಂಗಿನಹಾಲು ತೆಗೆದಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಜಾಪತ್ರೆ, ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ, ಅನಾನಸ್ ಹೂ, ಪುದೀನ, ಮೆಂತ್ಯ ಸೊಪ್ಪು ಹಾಕಿ ಘಮ್ಮೆನ್ನುವವರೆಗೆ ಹುರಿದು ಕೊಳ್ಳಿ.
ಇದಕ್ಕೆ ಶುಂಠಿ ಬೆಳುಳ್ಳಿ ಪೇಸ್ಟ್, ದಪ್ಪ ಮೆಣಸಿನಕಾಯಿ, ಬದನೆಕಾಯಿ, ಹಸಿಬಟಾಣಿ, ಅರಿಶಿನಪುಡಿ, ಗರಂಮಸಾಲ,ಧನಿಯಾ ಪುಡಿ, ಅಚ್ಚಖಾರದ ಪುಡಿಯನ್ನು ಹಾಕಿ ಬೆರಸಿ ಸ್ವಲ್ಪ ಹೊತ್ತು ಹುರಿಯಿರಿ. ಸಣ್ಣಗೆ ಹೆಚ್ಚಿದ ಟೊಮ್ಯಾಟೊ, ತೆಂಗಿನಕಾಯಿಯ ಹಾಲು, ನೆನಸಿದ ಅಕ್ಕಿ, ಕೊತ್ತಂಬರಿ ಸೊಪ್ಪು, ನಿಂಬೆರಸ ಎಲ್ಲವನ್ನೂ ಹಾಕಿ ಚೆನ್ನಾಗಿ ಮಗುಚಿ. ನೀರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ೨ ವಿಷಲ್ ಕೂಗಿಸಿದರೆ ಬದನೆಕಾಯಿ ವಾಂಗಿಬಾತ್ ರೆಡಿ.