ಸ್ಪೆಶಲ್ ಉಪ್ಪಿಟ್ಟು

ಬೇಕಾಗುವ ಸಾಮಗ್ರಿಗಳು

*ರವೆ – ೧ ಕಪ್
*ನೀರು – ೪ ಕಪ್
*ಎಣ್ಣೆ – ೩ ಚಮಚ
*ಸಾಸಿವೆ – ೧ ಚಮಚ
*ಕಡಲಬೇಳೆ – ೧ ಚಮಚ
*ಉದ್ದಿನಬೇಳೆ – ೧ ಚಮಚ
*ಗೋಡಂಬಿ – ೬
*ಕರಿಬೇವು -೧೫ ಎಲೆ
*ತುಪ್ಪ – ೨ ಚಮಚ
*ಈರುಳ್ಳಿ – ೧
*ಹಸಿರು ಮೆಣಸಿನಕಾಯಿ – ೩
*ಹಸಿಬಟಾಣಿ – ೨ ಚಮಚ
*ಶುಂಠಿ – ೧/೨
*ಕ್ಯಾರೆಟ್ – ೧
*ದಪ್ಪ ಮೆಣಸಿನಕಾಯಿ – ೧/೨
*ಕೊತ್ತಂಬರಿ ಸೊಪ್ಪು –
*ಉಪ್ಪು – ೧ ಚಮಚ
*ತೆಂಗಿನಕಾಯಿ ತುರಿ -೨ ಚಮಚ

ಮಾಡುವ ವಿಧಾನ :

ರವೆಯನ್ನು ತುಪ್ಪದೊಂದಿಗೆ ಕೆಂಪಗಾಗುವವರೆಗೆ ಹುರಿಯಿರಿ. ಕಡಾಯಿಗೆ ಎಣ್ಣೆ ಹಾಕಿ ಕಾಯಿಸಿ. ಎಣ್ಣೆಯಲ್ಲಿ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಗೋಡಂಬಿಯನ್ನು ಹದವಾಗಿ ಹುರಿದುಕೊಳ್ಳಿ. ಕರಿಬೇವನ್ನು ಸೇರಿಸಿ. ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಉದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಹಸಿ ಬಟಾಣಿ, ಚಿಕ್ಕದಾಗಿ ಕತ್ತರಿಸಿದ ಶುಂಠಿ, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ತೆಂಗಿನಕಾಯಿ ತುರಿ ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಒಂದೊಂದಾಗಿ ಹಾಕುತ್ತಲೇ ಕೈ ಯಾಡಿಸುತ್ತಿರಿ. ಇದಕ್ಕೆ ನೀರು ಹಾಕಿ. ಕುದಿ ಬಂದಾಗ ಹುರಿದ ರವೆಯನ್ನು ಹಾಕಿ ಗಂಟುಗಳಾಗದಂತೆ ಸ್ವಲ್ಪ ಕಲಸಿ, ಬೇಯಿಸಿದರೆ ಸುಲಭವಾಗಿ ಮಾಡಬಹುದಾದ ಸ್ಪೆಶಲ್ ಉಪ್ಪಿಟ್ಟು ಸಿದ್ಧ.