ಸ್ಪುಟ್ನಿಕ್ ಲಸಿಕೆ ಮತ್ತಷ್ಟು ವಿಳಂಬ

ನವದೆಹಲಿ.ಏ೩: ದೇಶಕ್ಕೆ ಮತ್ತೊಂದು ಕೊರೋನಾ ಲಸಿಕೆ ಸಿಗುವ ಭರವಸೆ ಹುಟ್ಟಿಸಿದ್ದ ಸ್ಪುಟ್ನಿಕ್ ಪ್ರಾಯೋಗಿಕ ವರದಿ ತೃಪ್ತಿಕರವಾಗಿಲ್ಲದ ಹಿನ್ನೆಲೆಯಲ್ಲಿ ಲಸಿಕೆ ಮತ್ತಷ್ಟು ವಿಳಂಭವಾಗಲಿದೆ ಎಂದು ತಿಳಿದು ಬಂದಿದೆ.
ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿತ್ತು. ಹೈದರಾಬಾದ್ ನಲ್ಲಿರುವ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಇದರ ಪ್ರಯೋಗ ನಡೆದಿದ್ದು, ಸ್ಪುಟ್ನಿಕ್ ಸಂಸ್ಥೆಯು ಈಗ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಪೆಷಲ್ ಎಕ್ಸಫರ್ಟ್ ಕಮಿಟಿ (Sಇಅ) ಮತ್ತು ಕೇಂದ್ರ ಔಷಧಿ ನಿಯಂತ್ರಣ ಸಂಸ್ಥೆ ಮನವಿ ಮಾಡಿತ್ತು.
ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಸ್ತ ಕೇಂದ್ರ ಔಷಧಿ ನಿಯಂತ್ರಣ ಸಂಸ್ಥೆ ನಡೆಸಿದ ಸಭೆಯ ಎದುರು ಸಂಸ್ಥೆಯು ಮೂರನೇ ಹಂತದಲ್ಲಿ ನಡೆಸಿದ ಪ್ರಯೋಗದ ವರದಿ ಸಲ್ಲಿಕೆ ಮಾಡಿತ್ತು. ಲಸಿಕೆ ಪಡೆದವರ ಸುರಕ್ಷತೆ ಮತ್ತು ರೋಗ ನಿರೋಧಕ ಕುರಿತ ಡೇಟಾ ಸಲ್ಲಿಕೆ ಮಾಡಿತ್ತು. ಈಗ ತಿಳಿದುಬರುತ್ತಿರುವ ಮಾಹಿತಿಗಳ ಪ್ರಕಾರ ಸ್ಪುಟ್ನಿಕ್ ಲಸಿಕಾ ಸಂಸ್ಥೆ ಸಲ್ಲಿಸಿರುವ ಡೆಟಾಗಳ ಬಗ್ಗೆ ತಜ್ಞರ ಸಮಿತಿ ಅತೃಪ್ತಿ ವ್ಯಕ್ತಪಡಿಸಿದೆ.
ಸ್ಪುಟಿಕ್ ಲಸಿಕಾ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಡೆಟಾ ಕೇಳಿದ್ದು ಅವುಗಳ ಸಲ್ಲಿಕೆಯಾದ ಬಗ್ಗೆ ಪರಿಶೀಲನೆ ನಡೆಸಿ ಸ್ಪುಟ್ನಿಕ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬ ಅಂತಿಮ ತಿರ್ಮಾನ ಕೈಗೊಳ್ಳಕಯ ತಜ್ಞರು ಮುಂದಾಗಿದ್ದಾರೆ.