ಸ್ಪುಟಿಕ್ನ್ ಲಸಿಕೆ ತುರ್ತು ಬಳಕೆ ಇಂದು ನಿರ್ಧಾರ

ನವದೆಹಲಿ, ಮಾ. ೩೧- ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಬಳಸುವ ರಷ್ಯಾ ಮೂಲದ ಸ್ಪುಟಿಕ್ನ್ -ವಿ ಲಸಿಕೆ ತುರ್ತು ಬಳಕೆಯ ಅಧಿಕಾರ ಕುರಿತಂತೆ ಇಂದು ಭಾರತ ನಿರ್ಧರಿಸಲಿದೆ.
ರಷ್ಯಾದ ಲಸಿಕೆ ಸ್ಪುಟಿಕ್ನ್ -ವಿ ತುರ್ತು ಬಳಕೆಯ ಅಧಿಕೃತ ಅರ್ಜಿ ಕುರಿತು ಕೇಂದ್ರ ಔಷಧ ನಿಯಂತ್ರಣ ವಿಷಯ ತಜ್ಞರ ಸಮಿತಿ ಇಂದು ಸಭೆ ನಡೆಸಿ, ಲಸಿಕೆ ತುರ್ತು ಬಳಕೆ ಕುರಿತಂತೆ ತನ್ನ ನಿರ್ಧಾರ ಪ್ರಕಟಿಸಲಿದೆ.
ಭಾರತದಲ್ಲಿನ ಲಸಿಕೆ ತಯಾರಕರಾದ ಡಾ. ರೆಡ್ಡಿಸ್ ಪ್ರಯೋಗಾಲಯ ಈಗಾಗಲೇ ಲಸಿಕೆ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿಯ ಕುರಿತಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು (ಡೇಟಾ) ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಇನ್ನು ೭ ಕೋವಿಡ್ ಲಸಿಕೆಗಳು ಕ್ಲಿನಿಕಲ್ ಪ್ರಯೋಗ ಹಂತದಲ್ಲಿದೆ ಎಂದು ೨ನೇ ಡೋಸ್ ಲಸಿಕೆ ಪಡೆದು ಅವರು ತಿಳಿಸಿದ್ದಾರೆ.
ಪ್ರಯೋಗ ಹಂತದಲ್ಲಿರುವ ೭ ಲಸಿಕೆಗಳಲ್ಲಿ ಈಗಾಗಲೇ ಕೆಲ ಲಸಿಕೆಗಳ ಪ್ರಯೋಗಳು ಹಾಗೂ ಪರೀಕ್ಷೆ ಮುಂದುವರೆದ ಹಂತದಲ್ಲಿದೆ. ಅಂದಾಜು ೨ ಡೆಜನ್‌ಗೂ ಅಧಿಕ ಲಸಿಕೆಗಳು ಕ್ಲಿನಿಕಲ್ ಪ್ರಯೋಗ ಹಂತದಲ್ಲಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
೨೦೨೦ ಸೆಷ್ಪೆಂಬರ್‌ನಲ್ಲಿ ಡಾ. ರೆಡ್ಡಿ ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಪಾಲುಗಾರಕೆಯನ್ನು ಪಡೆದುಕೊಂಡಿದ್ದಾರೆ. ಸ್ಪುಟಿಕ್ನ್ -ವಿ ಕ್ಲಿನಿಕಲ್‌ಗಳು ಪ್ರಯೋಗಗಳನ್ನು ನಡೆಸಲು ಭಾರತದಲ್ಲಿ ಅದರ ವಿತರಣಾ ಹಕ್ಕುಗಳಿಗಾಗಿ ಗಮಲೇಯ ನ್ಯಾಷನಲ್ ರೀಸರ್ಚ್ ಇನ್ಸಿಟ್ಯೂಟ್ ಆಫ್ ಎಫಿಡೆಮಿಯಾಲಜಿ ಅಂಡ್ ಮೈಕ್ರೋ ಬಯಾಲಾಜಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಕಳೆದ ವರ್ಷ ಆಗಸ್ಟ್ ೧೧ ರಂದು ರಷ್ಯಾ ಆರೋಗ್ಯ ಸಚಿವಾಲಯ ನೋಂದಾಯಿಸಿದೆ.
ಭಾರತ ಈಗಾಗಲೇ ೨ ಅನುಮೋದಿತ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಜನತೆ ನೀಡುತ್ತಿದೆ.