ಸ್ಪೀಡ್‍ಬ್ರೇಕರ್ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ 23ಕ್ಕೆ

ಕಲಬುರಗಿ:ನ.21:ಸಣ್ಣೂರ ಗ್ರಾಮಸ್ಥರ ವತಿಯಿಂದ ನ.23ರಂದು ಬೆಳಗ್ಗೆ10.30ಕ್ಕೆ ಸಣ್ಣೂರ ಗ್ರಾಮದಲ್ಲಿ ಗ್ರಾಮದ ಹತ್ತಿರ ಸ್ಪೀಡ್‍ಬ್ರೇಕರ್ ಹಾಕಬೇಕು ಎಂದು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಲಬುರಗಿ ತಾಲೂಕಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸಣ್ಣೂರ ಸಣ್ಣೂರ ಕ್ರಾಸ್ ಹತ್ತಿರ ಸ್ಟೀಡ್ ಬ್ರೇಕರ್ ಹಾಕಿಸಿಕೊಡಬೇಕು. ಈ ರಸ್ತೆಯಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವೃದ್ಧರು, ಶಾಲಾ ಮಕ್ಕಳು, ವಿಶೇಷ ಚೇತನರು, ಮಹಿಳೆಯರು, ಕೂಲಿ ಕಾರ್ಮಿಕರ ದಿನನಿತ್ಯ ಸಂಚರಿಸಿಕೊಂಡು ಹೋಗುತ್ತಿರುತ್ತಾರೆ. ಈಗಾಗಲೇ ಈ ರಸ್ತೆಯಲ್ಲಿ ಅನೇಕ ಅಫಘಾತಗಳು ಕೂಡ ಸಂಭವಿಸಿವೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಟೀಡ್ ಬ್ರೇಕರ್ ಹಾಕಿಸಿ, ಆಗುತ್ತಿರುವ ಅಪಘಾತಗಳನ್ನು ತಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.