ಸ್ಪೀಟ್ ಕಾರ್ನ್ ಚಾಟ್ ಮಸಾಲ

ಬೇಕಾಗುವ ಸಾಮಗ್ರಿಗಳು
*ಕೊತ್ತಂಬರಿ ಸೊಪ್ಪು
*ಅಚ್ಚಖಾರದ ಪುಡಿ
*ಕ್ಯಾರೆಟ್
*ಟೊಮೆಟೊ
*ಚಾಟ್ ಮಸಾಲ
*ಗರಂ ಮಸಾಲ
*ಕಾಳು ಮೆಣಸು
*ಸಿಹಿ ಜೋಳ
*ಹೆಸರು ಬೇಳೆ
*ಖಾರದ ಕಡಲೆಬೀಜ
*ನಿಂಬೆ ರಸ

ಮಾಡುವ ವಿಧಾನ:

ಬೌಲ್ ಗೆ ಕೊತ್ತಂಬರಿ ಸೊಪ್ಪು, ಅಚ್ಚ ಖಾರದ ಪುಡಿ, ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಟೊಮ್ಯಾಟೊ, ಈರುಳ್ಳಿ ಹಾಕಿಕೊಳ್ಳಿ. ನಂತರ ಚಾಟ್ ಮಸಾಲಾ, ಗರಂ ಮಸಾಲಾ, ಕಾಳು ಮೆಣಸಿನ ಪುಡಿ, ಸಿಹಿ ಜೋಳ ಹಾಗೂ ಹುರಿದ ಹೆಸರು ಬೇಳೆ, ಖಾರದ ಕಡಲೇಬೀಜ ಹಾಗೂ ಸೇವು ಸೇರಿಸಿಕೊಂಡು ಮೇಲೆ ನಿಂಬೆರಸ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ, ಸ್ವೀಟ್ ಕಾರ್ನ್ ಚಾಟ್ ಮಸಾಲಾ ಸವಿಯಲು ತಯಾರಾಗಿರುತ್ತದೆ.