ಸ್ಪಿನ್ ಮೋಡಿಗೆ ಕಿವೀಸ್ ತತ್ತರ, 296 ರನ್ ಗಳಿಗೆ ಸರ್ವಪತನ, ಭಾರತಕ್ಕೆ 63 ರನ್ ಮುನ್ನಡೆ

ಕಾನ್ಪುರ, ನ.27- ವಿಶ್ವಚಾಂಪಿಯನ್ ನ್ಯೂಜಿಲೆಂಡ್ ವಿರುದ್ದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 63 ರನ್ ಗಳ ಮುನ್ನಡೆ ಪಡೆದಿದೆ.
ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ, ಮೂರನೇ ದಿನದಾಟ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಶುಭ್ ಮನ್ ಗಿಲ್ ಕೇವಲ ಒಂದು ರನ್ ಗಳಿಸಿ ಜಾಮಿಸನ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ದಿನದಾಟದ ಅಂತ್ಯಕ್ಕೆ
ಪೂಜಾರ 9 ಹಾಗೂ ಮಯಾಂಕ್ ಅಗರ್ ವಾಲ್ 4 ರನ್ ಗಳಿಸಿ ಆಡುತ್ತಿದ್ದಾರೆ.
ಇದಕ್ಕೂ ಮುನ್ನ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್ ಗಳಿಗೆ ಸರ್ವಪತನ ಕಂಡಿತು. ನಿನ್ನೆ ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ದಾಖಲಿಸುವ ಸುಳಿವು ನೀಡಿದ್ದ ನ್ಯೂಜಿಲೆಂಡ್ ತಂಡವನ್ನು ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಸ್ಪಿನ್ ಮೋಡಿ ಕಟ್ಟಿಹಾಕಿತು.
ಆರಂಭಿಕ ಆಟಗಾರರು ಶತಕ ಸಿಡಿಸುವತ್ತ ದಾಪುಗಾಲು ಹಾಕಿದ್ದರು. ಲಧಾಂ ಕೇವಲ ಐದು ರನ್ ಗಳಿಂದ ಶತಕ ವಂಚಿತರಾದರೆ, ವಿಲ್ ಯಂಗ್ 89 ರನ್ ಗಳಿಸಿ ನಿರ್ಗಮಿಸಿದರು.
ನಾಯಕ ಕೇನ್ ವಿಲಿಯಮ್ಸ್ 18 ಹಾಗೂ ಜಾಮಿಸನ್ 23 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಬ್ಯಾಟರ್ ಗಳು ಉತ್ತಮ‌ ಆಟ ಪ್ರದರ್ಶಿಸಲು ವಿಫಲರಾದರು.
ಭಾರತದ ಪರ ಅಕ್ಷರ್ ಪಟೇಲ್ 5, ಅಶ್ವಿನ್ 3, ಜಡೇಜಾ ಹಾಗೂ ಉಮೇಶ್ ತಲಾ ಒಂದು ವಿಕೆಟ್ ಗಳಿಸಿದರು.