ಸ್ಪಾರ್ಕ್,ತಪ್ಪಿದ ಭಾರಿ ಅನಾಹುತ

ಇಂಡಿ:ಮಾ.31: ತಾಲೂಕಿನ ನಾದ ಕೆಡಿ ಗ್ರಾಮದ ಹೋಸೂರ ಸಮೀಪ ಮೇನ ರೋಡ ಪಕ್ಕದಲ್ಲಿ ಮೇನ್ ವಿದ್ಯುತ್ ಕಂಬದ ತಂತಿ ಕಡಿತವಾಗಿ ಸ್ಪಾರ್ಕದಿಂದ ಬೆಂಕಿ ಕೆಳಗೆ ಬಿದ್ದು,ಸುಮಾರು 200ಮೀಟರವರೆಗೆ ಬೆಂಕಿಯ ಜ್ವಾಲೆ ಹೊತ್ತಿಕೊಂಡು ಪಕ್ಕದ ರೈತರಾದ ಶರಣಾಬಾಯಿ ತಳವಾರ ಇವರ ಬಾವಿಯ ಸುತ್ತ ಕೂಡಿಟ್ಟ ಒಣಗಿದ ಕಟ್ಟಿಗೆಗಳಿಗೆ ಹಾಗೂ ಅನೇಕ ಗಿಡಮರಗಳಿಗೆ ಬೆಂಕಿ ತಗುಲಿ ಹಾನಿಯುಂಟಾಗಿದೆ.ಬೆಂಕಿಯ ಜ್ವಾಲೆ ಕಂಡು ತಕ್ಷಣ ನಂದಿಸುವಲ್ಲಿ ಸಾಮಾಜಿಕ ಹೋರಾಟಗಾರರಾದ ರಫೀಕ ವಾಲಿಕಾರ ಇವರು ಹಾಗೂ ಸಾರ್ವ ಜನಿಕರು ಕೂಡಿ ಮುಂದೆ ಬೃಹತ್ ಪ್ರಮಾಣದಲ್ಲಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವೀಯಾದರು. ನಂತರ ಅಗ್ನಿಶಾಮಕ ಸಿಬ್ಬಂಧಿಗಳು ಬಂದು ಬೆಂಕಿಯನ್ನು ನಂದಿಸಿದರು.