ಸ್ಪರ್ಶ ಆಸ್ಪತ್ರೆಯಲ್ಲಿ ಪ್ರತಿ 2ನೇ ಶನಿವಾರದಂದು ನರರೋಗ ಕಾಯಿಲೆಗಳಿಗೆ ಸಮಾಲೋಚನೆ

ಕಲಬುರಗಿ,ಜೂ.17: ನಗರದ ಸೇಡಂ ರಸ್ತೆಯಲ್ಲಿರುವ ಆರ್‍ಟಿಓ ಕ್ರಾಸ್ ಬಳಿ ಇರುವ ಸ್ಪರ್ಶ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಎರಡನೇ ಶನಿವಾರದಂದು ನರರೋಗ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ಮಾಡಲಾಗುವುದು ಎಂದು ಸುಲೇಪೇಟ್ ಮೂಲದ ಸ್ಪರ್ಶ ಆಸ್ಪತ್ರೆಯ ಪ್ರಮುಖ ನರರೋಗ ತಜ್ಞ ವೈದ್ಯ ಡಾ. ಶಿವಕುಮಾರ್ ಎಸ್. ಕುಕನೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಶ ಆಸ್ಪತ್ರೆಯನ್ನು ಡಾ. ಶರಣ್ ಪಾಟೀಲ್ ಅವರು ಕಳೆದ 2006ರಲ್ಲಿ ಸ್ಥಾಪಿಸಿದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಕಷ್ಟಕರವಾದ ವೈದ್ಯಕೀಯ ಸಮಸ್ಯೆಗಳಿಗೆ ಕಡಿಮೆ ದರದಲ್ಲಿ ಕಳೆದ 17 ವರ್ಷಗಳಿಂದ ರೋಗಿಗಳ ಸೇವೆ ಸಲ್ಲಿಸುತ್ತ ಬಂದಿದೆ ಎಂದರು.
ಬೆಂಗಳೂರಿನಲ್ಲಿ ಸುಸಜ್ಜಿತವಾದ ಮೂರು ಘಟಕಗಳು ದಾವಣಗೆರೆಯಲ್ಲಿ ಒಂದು ಮತ್ತು ಹಾಸನ್‍ದಲ್ಲಿ ಘಟಕಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಕಟ್ಟಿ ಬೆಳೆಸಲಾಗಿದೆ. ಅದೇ ರೀತಿಯಾಗಿ ಈ ವರ್ಷ ಇನ್ನೂ ಎರಡು ಘಟಕಗಳು ಪ್ರಾರಂಭವಾಗಲಿವೆ. 2ನೇ ದರ್ಜೆಯ ನಗರಗಳಲ್ಲಿ ಕಡಿಮೆ ದರದಲ್ಲಿ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಆಸ್ಪತ್ರೆ, ಕ್ಲಿನಿಕ್‍ಗಳನ್ನು ಪ್ರಾರಂಭಿಸಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‍ಗಳು ಕರ್ನಾಟಕದಾದ್ಯಂತ ತಿಂಗಳಿಗೆ 80ಕ್ಕೂ ಹೆಚ್ಚು ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಕಲಬುರ್ಗಿ, ಸಿಂಧನೂರು, ರಾಯಚೂರು, ಯಾದಗಿರಿ, ವಿಜಯಪುರ, ಹಾಸನ್, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾಂವ್, ಹಾವೇರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆ ಕ್ಲಿನಿಕ್‍ಗಳಿಗೆ ಪ್ರತಿವಾರ ಒಬ್ಬರಂತೆ ಬೆಂಗಳೂರಿನಿಂದ ನುರಿತ ತಜ್ಞ ವೈದ್ಯರು ಭೇಟಿ ನೀಡುತ್ತಾರೆ ಎಂದು ಅವರು ಹೇಳಿದರು.
ಬೆಂಗಳೂರಿನ ಯಶವಂತಪೂರ್ ಘಟಕದಲ್ಲಿ ಕಳೆದ 8 ವರ್ಷಗಳಿಂದ ಕಲಬುರ್ಗಿ, ಯಾದಗಿರಿಯಲ್ಲಿನ ಸುಮಾರು 1000ಕ್ಕೂ ಹೆಚ್ಚು ನರರೋಗ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಸುಮಾರು 8000ಕ್ಕೂ ಹೆಚ್ಚು ಹೊರ ರೋಗಿಗಳನ್ನು ತಪಾಸಣೆ ಮಾಡಲಾಗಿದೆ. ಎಲ್ಲ ರೋಗಿಗಳು ಆರೋಗ್ಯಕರವಾಗಿದ್ದು, ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಸ್ಪರ್ಶ ಆಸ್ಪತ್ರೆಯ ಎಲ್ಲ ಘಟಕಗಳಲ್ಲಿ ನರರೋಗ ಶಸ್ತರ ಚಿಕಿತ್ಸೆ ಘಟಕಗಳು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನರರೋಗ ಶಸ್ತ್ರ ಚಿಕಿತ್ಸೆಗಳನ್ನು (ನಿರೋ ನ್ಯಾವಿಗೇಶನ್, ಎಂಡೋಸ್ಕೊಪಿ, ತ್ರಿಡಿ ಮೈಕ್ರೋಸ್ಕೋಪ್ ಮತ್ತು ನಿರೋ ಮಾನಿಟರಿಂಗ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಅಭಿನಂದನ್, ಡಾ. ಲೋಕೇಶ್ ತರಿದಾಳು ಮುಂತಾದವರು ಉಪಸ್ಥಿತರಿದ್ದರು.