ಸ್ಪರ್ಧೆ: ಬಹುಮಾನ ವಿತರಣೆ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಸೆ 1: ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರಾ ನಿಮಿತ್ಯವಾಗಿ ಶ್ರೀ ಪಂಚಲಿಂಗೇಶ್ವರ ಟ್ರ್ಯಾಕ್ಟರ್ ಅಸೋಶಿಯೆಶನ್ ಹಾಗೂ ಸಮಸ್ತ ರೈತ ಬಾಂಧವರಿಂದ ಶ್ರೀ ರೇಣುಕಾ ಶುಗರ್ಸ ಕಾರ್ಖಾನೆಯ ಆವರಣದಲ್ಲಿ ದ್ವಿತೀಯ ಬಾರಿಗೆ ತೇರೆಬಂಡಿ ಜಗ್ಗುವ ಸ್ಪರ್ಧೆಗೆ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಚಾಲನೆ ನೀಡಿದರು.
ಪ್ರಥಮ ರಂಗಪೂರಿನ ಪಟಗುಂದೇಶ್ವರ ಪ್ರಸನ್ನ, ದ್ವಿತೀಯ ಬುಡರಕಟ್ಟಿಯ ಗ್ರಾಮದೇವಿ ಪ್ರಸನ್ನ, ತೃತೀಯ ಮೆಳ್ಳಿಕೆರಿಯ ಗುತ್ತೇಮ್ಮದೇವಿ ಪ್ರಸನ್ನ, ಚತುರ್ಥ ನಲಾನಟ್ಟಿಯ ಹುಲಿಗೆಮ್ಮಾದೇವಿ ಪ್ರಸನ್ನ, ಐದನೆಯ ಹಡಗಿನಾಳ ಮುತ್ತೇಶ್ವರ ಪ್ರಸನ್ನ, ಆರನೆಯ ಒಡಯರಟ್ಟಿಯ ರೇವಣ್ಣಸಿದ್ದೇಶ್ವರ ಪ್ರಸನ್ನ, ಏಳನೆಯ ಉದಗಟ್ಟಿ ಉದ್ದಮ್ಮಾದೇವಿ ಪ್ರಸನ್ನ, ಎಂಟನೆಯ ನಲಾನಟ್ಟಿಯ ಶ್ರೀ ಬಸವೇಶ್ವರ ಪ್ರಸನ್ನ ಹಿಗೆ ಎಂಟು ವಿಜೆತರಿಗೆ ನಗದು ಹಾಗೂ ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ 18 ಜೋಡಿಗಳು ಬಾಗವಹಿಸಿದ್ದವು ಸಂಘದ ಸದಸ್ಯರು, ರೈತರು ಉಪಸ್ಥಿತರಿದ್ದರು.