ಸ್ಪರ್ಧೆ ಖಚಿತ: ಚಿಕ್ಕನಗೌಡ್ರ

ಹುಬ್ಬಳ್ಳಿ, ಏ 16: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ನಡೆಸಿಕೊಂಡ ರೀತಿ ಹಾಗೂ ಅವರು ರಾಜೀನಾಮೆ ನೀಡುತ್ತಿರುವುದು ತೀವ್ರ ನೋವು ತಂದಿದೆ ಎಂದು ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಹೇಳಿದ್ದಾರೆ.

ನಗರದ ಶೆಟ್ಟರ್ ನಿವಾಸಕ್ಕೆ ಆಗಮಿಸಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷಗಳ ಕಾಲ ಪಕ್ಷ ಕಟ್ಟಿದ ಒಬ್ಬ ಪ್ರಭಾವಿನಾಯಕರಾದ ಶೆಟ್ಟರ್ ಅವರನ್ನು ಈ ಪರಿಸ್ಥಿತಿಗೆ ತಂದಿರುವುದು ನೋವು ತಂದಿದೆ ಎಂದರು.

ಈ ಬಾರಿಯ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ಶತ:ಸಿದ್ಧ ಎಂದ ಅವರು, ಸದ್ಯ ಕಾಂಗ್ರೆಸ್, ಜೆ.ಡಿ.ಎಸ್. ಕೆ.ಆರ್.ಪಿ.ಪಿ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದರು.