ಸ್ಪರ್ಧೆಯಿಂದ ಚನಶೆಟ್ಟಿಗೆ ಕೈಬಿಡಿ: ಓಂಪ್ರಕಾಶ ರೊಟ್ಟೆ

ಬೀದರ:ನ.7: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸುರೇಶ ಚನಶೆಟ್ಟಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿ ಉಲ್ಲಂಘನೆ ಮಾಡಿದ್ದು, ಅವರನ್ನು ಸ್ಪರ್ಧೆಯಿಂದ ತೆಗೆದು ಹಾಕಬೇಕೆಂದು ಸಾಮಾಜಿಕ ಹೋರಾಟಗಾರ ಮತ್ತು ವಿಶ್ವಕ್ರಾಂತಿ ದಿವ್ಯಪೀಠ ಬೀದರ ಅಧ್ಯಕ್ಷರಾದ ಓಂಪ್ರಕಾಶ ರೊಟ್ಟೆ ಆಗ್ರಹಿಸಿದ್ದಾರೆ. ಒಂದು ಬಾರಿ ಅಧ್ಯಕ್ಷರಾಗಿ ಚುನಾಯಿತರಾದವರು ಮುಂದಿನ ಅವಧಿಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮ 18(ಅ) ದಲ್ಲಿ ಪಾಲನೆ ಮಾಡುವಂತೆ ಧಾರವಾಡ ಹೈಕೋರ್ಟ್ ಸೂಚನೆ ನೀಡಿದೆ. ಸುರೇಶ ಚನಶೆಟ್ಟಿ ಅವರು ಈಗಾಗಲೇ ಒಂದು ಅವಧಿಗೆ ಕಸಾಪ ಅಧ್ಯಕ್ಷರಾಗಿ ಮತ್ತೆ ಎರಡನೇ ಬಾರಿಗೆ ಸ್ಪರ್ಧೆ ಮಾಡಿ ಕಸಾಪ ನಿಯಮಾವಳಿ ಉಲ್ಲಂಘನೆ ಮಾಡಿರುತ್ತಾರೆ. ಆದ್ದರಿಂದ ಕೂಡಲೇ ಇವರ ಸ್ಪರ್ಧೆ ರದ್ದು ಮಾಡಿ, ನಾಮಪತ್ರ ತಿರಸ್ಕøತಗೊಳಿಸಬೇಕು. ಇಲ್ಲದಿದ್ದರೆ ಮಾನ್ಯ ನ್ಯಾಯಾಲಯಕ್ಕೆ ಮೊರೆ ಹೋಗಿ ಸುರೇಶ ಚನಶೆಟ್ಟಿ ಅವರ ಸ್ಪರ್ಧೆ ರದ್ದುಪಡಿಸಲಾಗುವುದು ಎಂದು ರೊಟ್ಟೆ ಆಗ್ರಹಿಸಿದ್ದಾರೆ.