ಸ್ಪರ್ಧೆಗೆ ಅಡ್ಡಿ, ತೀರ್ಪು ಅಸಂಭವಪ್ರಾಥಮಿಕ ಕಾನೂನು ಪ್ರಕ್ರಿಯೆ ಕೊರತೆ,ಅಮರೇಶ್ವರ್ ನಾಯಕ ಸ್ಪರ್ಧೆ ಬಹುತೇಕ ಖಚಿತ

ಸಂಜೆವಾಣಿ ಪ್ರತಿನಿಧಿಯಿಂದ
ರಾಯಚೂರು,ಏ೧೭:ರಾಯಚೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ರಾಜಾ ಅಮೇರೇಶ್ವರ ನಾಯಕ ಅವರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಏ೧೯ರಂದು ಉಚ್ಚ ನ್ಯಾಯಲದಿಂದ ಹೊರ ಬೀಳಿಲಿರುವ ತೀರ್ಪು ಅವರ ಚುನಾವಣೆ ಸ್ಪರ್ಧೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದು ಅಸಂಭವವಾಗಿದೆ.
ಯಾವುದೇ ವ್ಯಕ್ತಿಯ ಜಾತಿ ಪ್ರಮಾಣಪತ್ರ ನಿರ್ಧಾರಕ್ಕೆ ಸಂಬಂಧಿಸಿದಂತೆ ದೀರ್ಘ ಕಾಲದ ಪ್ರಾಥಮಿಕ ಕಾನೂನು ಪ್ರಕ್ರಿಯೆಗಳ ಅವಶ್ಯಕತೆ ಹಿನ್ನಲೆಯಲಿ ಏ೧೯ ರಂದು ರಾಯಚೂರು ಲೋಕಸಭಾ ಕೇತ್ರ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಅವರ ಜಾತಿ ನಿರ್ಧಾರಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ತೀರ್ಪು ಅಸಂಭವ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಜಾ ಅಮರೇಶ್ವರ ನಾಯಕ ಅವರ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರ ಮೇಲೆ ತೀರ್ಮಾನವಾಗಲಿದೆಯೇ ಹೊರೆತು ಸದ್ಯಕ್ಕೆ ನ್ಯಾಯಾಲದಿಂದ ಹೊರಬೀಳಲಿರುವ ತೀರ್ಪು ಅವರ ಚುನಾವಣೆ ಸ್ಪರ್ಧೆ ಮೇಲೆ ಯಾವುದೇ ಪರಿಣಾಮ ಬಿರುವ ಸಾಧ್ಯತೆ ಕಡಿಮೆ. ಅಮರೇಶ್ವರ ನಾಯಕ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ,ನಾಮ ಪತ್ರ ತಡೆಕೊರಲು ಈ ಪರಿಸ್ಥಿತಿಯಲ್ಲಿ ಅವಕಾಶಗಳು ಕಡಿಮೇ ಎಂದೇ ಹೇಳಬಹುದಾಗಿದೆ.
ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿಯಿಂದ ಟಿಕೆಟ್ ಪಡೆದಿರುವ ರಾಜಾ ಅಮರೇಶ್ವರ ನಾಯಕ ಅವರು ಮೂಲತಃ ಹಿಂದೂ ಕ್ಷತ್ರೀಯ ಜಾತಿಗೆ ಸೇರಿದ್ದು,ಪರಿಶಿಷ್ಟ ಜಾತಿಗೆ ಸರ್ಕಾರ ಮಿಸಲಿಟ್ಟಿರುವ ಕ್ಷೇತ್ರಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಅವರನ್ನು ಪರಿಶಿಷ್ಠ ಜಾತಿಯಿಂದ ವಿಮುಕ್ತಗೊಳಿಸಿ ಅವರ ಸ್ಪರ್ಧೆಯನ್ನು ತಡೆಹಿಡಿಯಬೇಕೆಂದು ಮಾನವಿ ಮೂಲದ ನರಸಿಂಹ ನಾಯಕ ಎನ್ನುವವರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಕಾಯ್ದಿರಿಸಿದ್ದು ಏ೧೯ ರಂದು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಆದರೆ ಜಾತಿ ಪ್ರಮಾಣ ಪತ್ರ ನಿರ್ಧರಿಸಲು ಹೈಕೋಟ್‌ಗೆ ಅರ್ಜಿ ಸಲ್ಲಿಸುವ ಮೊದಲು ಸಾಕಷ್ಟು ಪ್ರಾಥಮಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಅವಶ್ಯಕತೆಯಿದ್ದು, ಸದ್ಯ ದೂರುದಾರ ನರಸಿಂಹ ನಾಯಕ ಅವರು ಯಾವುದೇ ಪ್ರಾಥಮಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈsಸಿದ್ದಾರೆ ಎನ್ನುವ ಕುರಿತು ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ.
ಏನಿದು ಪ್ರಾಥಮಿಕ ಕಾನೂನು ಪ್ರಕ್ರಿಯೆ?
ವ್ಯಕ್ತಿಯ ಜಾತಿಗೆ ಸಂಬಂಧಿಸಿದಂತೆ ಅನುಮಾನಗಳು ಬಂದಲ್ಲಿ ತಮಗೆ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಮೊದಲು ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಭೆಗೆ ದೂರು ಸಲ್ಲಿಸುವ ಅವಶ್ಯಕತೆಯಿದೆ,ಜಿಲ್ಲಾಧಿಕಾರಿಗಳೇ ಈ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವುದರಿಂದ ದೂರು ಆಧರಿಸಿ ಜಾತಿ ಪ್ರಮಾಣ ಪತ್ರ ಸತ್ಯಾಸತ್ಯತೆ ಕುರಿತು ಸಮಿತಿಗೆ ವರದಿ ಸಲ್ಲಿಸುವಂತೆ ಸೂಚಿಸಬೇಕಾಗಿದೆ, ಸಮಿತಿ ವರದಿ ಸಲ್ಲಿಸಿದ ನಂತರ ವರದಿ ಆಧರಿಸಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ವ್ಯಕ್ತಿಗೆ ದಂಡ ವಿದಿಸಬಹುದಾಗಿದೆ,ಆದರೆ ಜಿಲ್ಲಾಧಿಕಾರಿಗಳ ತೀರ್ಪು ಒಂದು ವೇಳೆ ದೂರದಾರನಿಗೆ ಸಮಾಧಾನವಾಗದಿದ್ದರೆ,ದೂರುದಾರ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ.ದೂರುದಾರನಿಗೆ ಜಾರಿ ನಿರ್ದೇಶನಾಲಯದ ತೀರ್ಪು ಸಹ ಸಮಾದಾನವಾಗದಿದ್ದರೆ ನಂತರ ದೂರುದಾರ ಉಚ್ಚ ನ್ಯಾಯಲಯದ ಮೆಟ್ಟಿಲೇರಲು ಸಾಧ್ಯವಾಗಲಿದೆ,
ಅಮರೇಶ್ವರ ನಾಯಕ ಅವರ ಜಾತಿ ಪ್ರಮಾಣಕ್ಕೆ ಸಂಬಂಧಿಸಿದಂತೆ ದೂರುದಾರ ನರಸಿಂಹ ನಾಯಕ ಅವರು ಈ ಯಾವ ಪ್ರಾಥಮಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿಲ್ಲ ಎನ್ನಲಾಗಿದ್ದು,ಈ ಹಿನ್ನೆಲೆಯಲ್ಲಿ ಏ೧೯ರಂದು ಅಮರೇಶ್ವರ ನಾಯಕ ಅವರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ತೀರ್ಪು ಹೊರಬರುವುದು ಅಸಂಭವವಾಗಿದೆ.
ನ್ಯಾಯಾಲಯದ ತೀರ್ಪಿನ ಸಾಧ್ಯತೆಗಳೇನು?
ಅರ್ಜಿದಾರ( ದೂರುದಾರ) ನರಸಿಂಹ ನಾಯಕ ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಂii ಅಮರೇಶ್ವರ ನಾಯಕ ಅವರ ಜಾತಿ ಪ್ರಮಾಣ ಪತ್ರ ನಕಲಿ ಎಂದು ಸಾಭೀತು ಪಡಿಸಲು ಈ ಎಲ್ಲಾ ಪ್ರಾಥಮಿಕ ಕಾನೂನು ಪ್ರಕ್ರಿಯೇ ಪೂರೈಸುವಂತೆ ಸೂಚಿಸಬಹುದು,ಜಿಲ್ಲಾ ಜಾತೀ ಪ್ರಮಾಣ ಪತ್ರ ಪರಿಶೀನಾ ಸಮಿತಿಗೂ ದೂರುದಾರರ ಅರ್ಜಿಯನ್ನು ಪರಿಗಣಿಸಿ ಪ್ರಾಥಮಿಕ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಅಂತಿಮವಾಗಿ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಬಹುದು.
ಮತ್ತೊಂದು ಮಾಹಿತಿಯನ್ವಯ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ೬ ತಿಂಗಳು ಮೊದಲೇ ಈ ಪ್ರಕ್ರಿಯೇ ಆರಂಭವಾಗಬೇಕಿತ್ತು ಮತ್ತು ಎದುರಾಳಿ ಅಭ್ಯರ್ಥಿಯೇ ಅಮರೇಶ್ವರ ನಾಯಕ ಅವರ ಜಾತಿಗೆ ಸಂಬಂಧಿಸಿದಂತೆ ಅವರ ಸ್ಪರ್ಧೆ ವಿರುದ್ಧ ಅಕ್ಷೇಪವೆತ್ತಿ ಅಮರೇಶ್ವರ ನಾಯಕ ಅವರ ಸ್ಪರ್ಧೆಗೆ ಸಂಬಂಧಿಸಿದಂತೆ ಮಧ್ಯಂತರ ತಡೆ ಆದೇಶವನ್ನು ನ್ಯಾಯಾಲಯದಿಂದ ಪಡೆದುಕೊಂಡಿದ್ದರೇ ಅಮರೇಶ್ವರ ನಾಯಕ ಅವರ ಸ್ಪರ್ಧೆಗೆ ಅಡ್ಡಿಪಡಿಸಲು ಕಾನೂನಿನಲ್ಲಿ ಅವಕಾಶವಿತ್ತು.ಅದರೆ ಅಮೇಶ್ವರ ನಾಯಕ ಅವರ ಜಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ಯಾವುದೇ ಪ್ರಕ್ರಿಯೆಗಳು ಪೂರೈಕೆಯಾಗದಿರುವುದು ಅಮರೇಶ್ವರ ನಾಯಕ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ಅಡ್ಡಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲದಂತಾಗಿದೆ. ನಾಯಕ ಅವರು ನಿರಂತಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿದೆ ಎನ್ನುವುದೇ ಕಾನೂನು ತಜ್ಞರ ಅಭಿಪ್ರಾಯ ಅದರೂ ನ್ಯಾಯಾಲಯ ಯಾವ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಲಿದೆ ಎನ್ನುವುದು ರಾಯಚೂರು ಲೋಕಸಭಾ ಕ್ಷೇತ್ರ ಮತದಾರರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಬಾಕ್ಸ್

  • ಸ್ಪರ್ಧೆಗೆ ಅಡ್ದಿ ತೀರ್ಪು ಅಸಂಭವ
  • ಪ್ರಾಥಮಿಕ ಕಾನೂನು ಪ್ರಕ್ರಿಯೆ ಅನುಮಾನ
  • ಹೈಕಮಾಂಡ್ ತೀರ್ಮಾನ, ಸ್ಪರ್ಧೆಗೆ ತಿರುವು
  • ಜಾತಿ ಪರಿಶೀಲನೆ ಸಮಿತಿಗೆ ಸೂಚನೆ ಸಾಧ್ಯತೆ
  • ಜಾತಿ ನಿರ್ಧಾರ ಪ್ರಕ್ರಿಯೆ ಸುದೀರ್ಘ
  • ನ್ಯಾಯಾಲಯದ ತೀರ್ಪು ಕುತೂಹಲ
  • ತೀರ್ಪು ಕುರಿತಂತೆ ಕಾನೂನು ತಜ್ಞರ ಅಭಿಪ್ರಾಯ