ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.03: ಜಿಲ್ಲಾ ಪಂಚಾಯತ್ ಬಳ್ಳಾರಿ ಅವರಿಂದ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ, ಏಳನೇ, ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಹಂತದ ವಿವಿಧ ಸ್ಫರ್ಧೆಗಳು ಅಂದರೆ ಚಿತ್ರಕಲೆ ಯಲ್ಲಿ ಮನೆ ಹಂತದಲ್ಲಿ ಬಳಸಿದ ತ್ಯಾಜ್ಯ ನೀರಿನ ನಿರ್ವಹಣೆ ಎಂಬ ವಿಷಯದ ಕುರಿತು ಏರ್ಪಡಿಸಿದ ಸ್ಪರ್ಧೆಯಲ್ಲಿ ರಾಧಿಕಾ, ಮಹೇಶ್, ಮನು ಬಹುಮಾನ ಪಡೆದರೆ ,ಪ್ರಬಂಧ ಸ್ಪರ್ಧೆಯಲ್ಲಿ ಸುಮ,ಸಂಗೀತ ಹಾಗೂ ಲಕ್ಷ್ಮಿಕಾಂತ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಅನುಕ್ರಮವಾಗಿ ಪಡೆದರು.
ಶಾಲೆಯ ಮುಖ್ಯಗುರುಗಳಾದ ರವಿಚೇಳ್ಳಗುರ್ಕಿ, ಶಿಕ್ಷಕರಾದ ವಿ.ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಚನ್ನಮ್ಮ, ಸುಮತಿ, ವೈಶಾಲಿ,ಶ್ವೇತಾ,ಉಮ್ಮೆಹಾನಿ,ಶಶಮ್ಮ, ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.

One attachment • Scanned by Gmail