ಸ್ಪರ್ಧಾ ವಿಜೇತ ಮಕ್ಕಳಿಗೆ ಹೆಲಕಾಪ್ಟರನಲ್ಲಿ ರೌಂಡ್ಸ್

ಗೋಕಾಕ, ಜ 11- ಪಟ್ಟಣದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಎಂಬಿವಿ ಆಶ್ರಯದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸದಾ ಒಂದಿಲೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮಾನವ ಬಂಧುತ್ವ ವೇದಿಕೆ ಈ ಬಾರಿ ಯುವಜನತೆಯನ್ನು ಸೆಳೆಯುವ ಮೂಲಕ ಹೆಲಿಕಾಪ್ಟರ್ ರೈಡಿಂಗ್ ಅವಕಾಶ ನೀಡಿ ಗಮನ ಸೆಳೆಯಿತು.
ಹೆಲಿಕಾಪ್ಟರ್‍ನಲ್ಲಿ ಗೋಕಾಕ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸುತ್ತ ರೌಂಡ್ ಹೊಡೆಯುವ ಮೂಲಕ ವಿಜೇತ ಯುವಕ-ಯುವತಿಯರಿಗೆ ಹೊಸ ಅನುಭವ ನೀಡಿದರು.
ಪ್ರಬಂಧ ಸ್ಪರ್ಧೆ ವಿಜೇತರ ಹೆಸರು:ಬೆಳಗಾವಿಯ ವೈಷ್ಣವಿ ಕಡೋಲ್ಕರ್, ಶಿರಗುಪ್ಪಿಯ ಜ್ಯೋತಿ ಗುದ್ದೀನ, ರಾಯಚೂರಿನ ಸುಧಾ ಕರ್ಲಿ, ಯಾದವಾಡದ ಸಿಮ್ರಾನ್ ಬಾಗವಾನ್, ಚಾಮರಾಜನಗರದ ಮಾನಸ ವಿ ಪ್ರಶಸ್ತಿ ಪಡೆದು ಹೆಲಿಕಾಪ್ಟರ್ ನಲ್ಲಿ ಸುತ್ತಾಡಿದರು.
ಭಾಷಣ ಸ್ಪರ್ಧೆ ವಿಜೇತರು:ತೀರ್ಥಹಳ್ಳಿಯ ಪೂಜಾ ತೀರ್ಥಹಳ್ಳಿ, ಘಟಪ್ರಭಾದ ಮುಷ್ರಫ್ ಸಯ್ಯದ, ಕಲಬುರ್ಗಿಯ ಪ್ರಿಯಂಕಾ ಭರಣಿ, ಮೆಳವಂಕಿಯ ಪವಿತ್ರಾ ಹತ್ತರವಾಟ,ಧಾರವಾಡದ ಶ್ವೇತಾ ಜುಗಳೆ, ಕಲಖಾಂಬದ ಶಾಮಲಾ ಭರಮಾ ಹಿರೋಜಿ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ
ಪಡೆದುಕೊಂಡಿದ್ದಾರೆ.
ಮುಂದೆಯೂ ವಿನೂತನ ಕಾರ್ಯಕ್ರಮ
ನಮಗಾಗಿ ಹೋರಾಡಿದ ಮಹನಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಮುಂದೆಯೂ ಸಹ ಮಹಾನ್ ನಾಯಕರ ಜಯಂತಿಯಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ, ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕರ್, ರಾಮಕೃಷ್ಣ ಪಾನಬುಡೆ,ರಿಯಾಜ್ ಚೌಗಲಾ ಸೇರಿದಂತೆ ಮುಂತಾದವರು ಇದ್ದರು. ಮಹಾಲಿಂಗಪ್ಪ ಆಲಬಾಳ ನಿರೂಪಿಸಿ, ವಂದಿಸಿದರು.