ಸಿಂಧನೂರು ಸೆ.೨೧ ತಾಲೂಕ ಮಟ್ಟದ ಕ್ರೀಡಾಕೂಟ ಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಆರೋಗ್ಯ ಕರವಾಗಿ ಆಟಗಳನ್ನು ಆಡಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಸಿಂಧನೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲೂಕ ಮಟ್ಟದ ಕ್ರೀಡಾಕೂಟ ಗಳ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಯಾವುದೇ ಕ್ರೀಡೆಗಳನ್ನು ಕ್ರೀಡೆಗಳಂತೆ ಆಡಿ ಸೋಲು ಗೆಲುವು ಸಹಜ ,ಸೋತಾಗ ಹತಾಶರಾಗದೆ ಕ್ರೀಡಾ ಸ್ಪೂರ್ತಿ ಮನೋಭಾವದಿಂದ ಭಾಗವಹಿಸಿ ಮತ್ತು ಕ್ರೀಡೆಗಳಲ್ಲಿ ತಿರ್ಪುಗಾರರ ತೀರ್ಪು ಗಳಿಗೆ ತಲೆ ಬಾಗಿ ಯಾವುದೇ ವಾದಕ್ಕೆ ಇಳಿಯಬೇಡಿ ತಾಲೂಕ ಮಟ್ಟದಲ್ಲಿ ಗೆದ್ದು ಜಿಲ್ಲಾ ,ರಾಜ್ಯ ಮಟ್ಟದಲ್ಲಿ ಗೆದ್ದು ಸಿಂಧನೂರಿನ ಹೆಸರನ್ನು ಪ್ರಚಾರಗೊಳಿಸಲಿ ಎಂದು ಮಾತನಾಡಿದರು.
ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ ಮಾತನಾಡುತ್ತಾ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಸಿಂಧನೂರಿನ ಹೆಸರನ್ನು ಬೆಳಗಲಿ ಎಂದರು ಮತ್ತು ಕ್ರೀಡಾ ಸಾಮಗ್ರಿಗಳಿಗೆ ನೀಡಿದ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಹಾಗೂ ಅವಶ್ಯಕತೆ ಇರುವ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಕೂಡ ಆಗಬೇಕು ಎಂದು ಮಾತನಾಡಿದರು .
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಸೋಮಲಾಪುರ ಶಾಲೆಯ ವಿದ್ಯಾರ್ಥಿಗಳು ಹಾಗೂ ಆರ್.ಜಿ .ಎಮ್ ಶಾಲೆಗಳ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ ಗೌಡ ಪಾಟೀಲ್ ವಹಿಸಿದ್ದು ,ತಹಶಿಲ್ದಾರ ಅರುಣ್ ಕುಮಾರ ದೇಸಾಯಿ ,ವಿಜಯ ರಂಗಾರಡ್ಡಿ , ಸಾಬಣ್ಣ ವಗ್ಗರ್ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.