ಸ್ಪರ್ಧಾ ಜಗತ್ತಿನಲ್ಲಿ ಛಾಯಾಗ್ರಾಕರು ಕೌಶಲ್ಯಪೂರಿತರಾಗಿರಬೇಕು

ದಾವಣಗೆರೆ.ಫೆ.೨೨: ಕನ್ನಡಿಯಲ್ಲಿ ನಮ್ಮ ಬಿಂಬ ಪ್ರತಿಬಿಂಬಿಸುವಂತೆ ಛಾಯಾಗ್ರಾಹಕರು ಸಮಾಜದ ಅಂಕುಡೊಂಕುಗಳನ್ನು ಛಾಯಾಚಿತ್ರದ ಮೂಲಕ ಜನರೆದುರು ಬಿಂಬಿಸುತ್ತಾರೆ ಎಂದು ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್ ನುಡಿದರು.ಕರ್ನಾಟಕ ರಾಜ್ಯ ವೃತಿಪರ ಛಾಯಾಗ್ರಾಹಕ ಸಂಘಟನೆಗಳ ಒಕ್ಕೂಟ (ರಿ) ದಿಂದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಒಕ್ಕೂಟದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೊರಾನಾದಿಂದ ಆದ ಹಾನಿಯನ್ನು ಚಿತ್ರಗಳ ಮೂಲಕ ಜಗತ್ತಿಗೆ ತೋರಿಸಿದವರು ಛಾಯಾಗ್ರಾಹಕರು. ಆದರೆ ಕೊರೊನಾ ಸಮಯದಲ್ಲಿ ಅವರುಗಳು ತಮ್ಮ ವೃತ್ತಿ ಜೀವನದಲ್ಲಿ ತುಂಬಾ ತೊಂದರೆ ಅನುಭವಿಸಿದ್ದಾರೆ. ತಂತ್ರಜ್ಞಾನ ಆಧಾರಿತ ಸೇವೆ ನಿಮ್ಮದಾಗಿದ್ದು, ವನ್ಯಜೀವಿ ಛಾಯಾಗ್ರಾಹಕರಾಗಿ, ಪತ್ರಿಕಾ ಛಾಯಾಗ್ರಾಹಕರಾಗಿ,  ಅನೇಕ ರಾಜಕೀಯ ಸಮಾರಂಭ, ವಿವಾಹ ಸೇರಿದಂತೆ ಅನೇಕ ಸಮಾರಂಭಗಳಲ್ಲಿ ಛಾಯಾಚಿತ್ರ ತೆಗೆಯುತ್ತೀರಿ. ನಿಮ್ಮ ಸೇವೆ ಎಲ್ಲಾ ವೇಳೆಯಲ್ಲೂ ಅಗತ್ಯವಾಗಿದೆ ಎಂದು ಛಾಯಾಗ್ರಾಹಕರ ಮಹತ್ವವನ್ನು ತಿಳಿಸಿದರು.ಸ್ಪರ್ಧಾ ಜಗತ್ತಿನಲ್ಲಿ ಛಾಯಾಗ್ರಾಕರು ಕೌಶಲ್ಯಪೂರಿತರಾಗಿರಬೇಕು. ಯಾವುದೇ ಕ್ಷಣವನ್ನು ಸಹ ತಪ್ಪಿಸುವ ಹಾಗಿಲ್ಲ. ಅನೇಕ ಎಡರು ತೊಡರುಗಳ ನಡುವೆಯೂ ಅದನ್ನು ಮೀರಿ ಚಾಕಚಕ್ಯತೆಯಿಂದ ನಿಮ್ಮಕ ವೃತ್ತಿಯನ್ನು ರೂಪಿಸಿಕೊಳ್ಳಬೇಕಿದೆ ಎಂದರು. ಒಕ್ಕೂಟದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಛಾಯಾಗ್ರಾಹಕರ ಬದುಕು ಈ ಮೊದಲು ಕತ್ತಲೆಯ ಕೊಣೆಯಲ್ಲಿತ್ತು.ಬಳಿಕ ತಂತ್ರಜ್ಞಾನ ಬೆಳೆದಂತೆ ಕತ್ತಲೆಯ ಕೋಣೆಯಿಂದ ಬೆಳಕಿಗೆ ಬಂದ ಛಾಯಾಗ್ರಾಹಕರ ಬದುಕಿನಲ್ಲಿ ಮಾತ್ರ ಕತ್ತಲೆ ಆವರಿಸಿತು ಕಾರಣ ಆಧುನಿಕ ತಂತ್ರಜ್ಞಾನ,ಸೋಷಿಯಲ್ ಮಿಡಿಯಾದ ಹಾವಳಿಗೆ ಛಾಯಾಗ್ರಾಹಕರ ಬದುಕು ತತ್ತರಿಸಿದೆ.ಛಾಯಾಗ್ರಾಹಕರಿಗೆ ಸೂಕ್ತ ಸ್ಪಂದನೆಯಿಲ್ಲ,ಯಾವುದೇ ಸರ್ಕಾರಿ ಯೋಜನೆಗಳಿಲ್ಲ ನಮ್ಮ ಸಮಸ್ಯೆಗಳ ನಿವಾರಣೆಗಾಗಿ ಸಂಘಟನೆ ರೂಪಿಸಲಾಗಿದೆ.ಸೂಕ್ತ ಬೈಲಾ ರೂಪಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.ಅಸಂಘಟಿತ ವಲಯವಾದ ಛಾಯಾಗ್ರಾಹಕರಿಗೆ ವಿಶೇಷ ಯೋಜನೆ ರೂಪಿಸುವಂತೆ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ರಾಜ್ಯಮಟ್ಟದಲ್ಲಿ ಎಲ್ಲಾ ಛಾಯಾಗ್ರಾಹಕರು ಒಂದೆಡೆ ಸೇರಬೇಕೆಂಬ ಅಭಿಲಾಷೆಯಿಂದ ಒಕ್ಕೂಟ ರಚನೆ ಮಾಡಲಾಗಿದೆ ಎಂದರು.ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಕೆ.ರಾಮಣ್ಣ,ಶ್ರೀಧರ್,ಚಂದ್ರಶೇಖರ್ ಉಪಸ್ಥಿತರಿದ್ದರು. ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಜಯಜಾಧವ್ ಸರ್ವರನ್ನೂ ಸ್ವಾಗತಿಸಿದರು.

One attachment • Scanned by Gmail

ReplyForward